alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿದೆ ನೋಡಿ ಖತರ್ನಾಕ್ ಗಳ ಕೈ ಚಳಕ

ತುಮಕೂರು: ವ್ಯಕ್ತಿಯ ಗಮನ ಬೇರೆಡೆ ಸೆಳೆದು ಕಾರ್ ನಲ್ಲಿದ್ದ 3.80 ಲಕ್ಷ ರೂ. ದೋಚಿದ ಘಟನೆ ತುಮಕೂರಿನ ಬಟವಾಡೆ ಪ್ರದೇಶದಲ್ಲಿ ನಡೆದಿದೆ.

ಹೆಗ್ಗೆರೆ ನಿವಾಸಿ ಅಬ್ದುಲ್ ಖುದ್ದೂಸ್ ಹಣ ಕಳೆದುಕೊಂಡವರು. ಕರ್ನಾಟಕ ಬ್ಯಾಂಕ್ ನಿಂದ ಡ್ರಾ ಮಾಡಿದ್ದ ಹಣವನ್ನು ಖುದ್ದೂಸ್ ಸೂಟ್ ಕೇಸ್ ನಲ್ಲಿಟ್ಟುಕೊಂಡು ಹೊರಟಿದ್ದಾರೆ.

ಬಟವಾಡೆ ಪ್ರದೇಶದಲ್ಲಿ ಕಾರ್ ನಿಲ್ಲಿಸಿದ್ದ ಸಂದರ್ಭದಲ್ಲಿ ಅಲ್ಲಿ ಕಾಣಿಸಿಕೊಂಡ ಅಪರಿಚಿತರು, ಮೊದಲೇ ಕೆಲವು ನೋಟ್ ಗಳನ್ನು ಎಸೆದು ಕಾರ್ ಬಳಿ ಹಣ ಬಿದ್ದಿದೆ ಎಂದು ತಿಳಿಸಿದ್ದಾರೆ.

ಖುದ್ದೂಸ್ ಮತ್ತು ಅವರ ಕಾರ್ ಚಾಲಕ ನೋಟ್ ಗಳನ್ನು ಆಯ್ದುಕೊಳ್ಳುವ ಸಂದರ್ಭದಲ್ಲಿ ಕಾರ್ ನಲ್ಲಿಡಲಾಗಿದ್ದ ಹಣದ ಸೂಟ್ ಕೇಸ್ ಎಗರಿಸಿ ಪರಾರಿಯಾಗಿದ್ದಾರೆ.

ಘಟನೆಯ ದೃಶ್ಯಗಳು ಸಮೀಪದಲ್ಲೇ ಅಳವಡಿಸಲಾಗಿದ್ದ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೊಸ ಬಡಾವಣೆ ಠಾಣೆ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದು, ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...