alex Certify
ಕನ್ನಡ ದುನಿಯಾ       Mobile App
       

Kannada Duniya

ಕತ್ತಲಲ್ಲಿ ಯುವತಿ ಮೇಲೆ ಕೈ ಹಾಕಿದ ಕಂಡಕ್ಟರ್

ತುಮಕೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ, ಕಂಡಕ್ಟರ್ ಕೈ ಹಾಕಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಹೊಳೆನರಸೀಪುರ ಡಿಪೋ ಕಂಡಕ್ಟರ್ ಇಂತಹ ಕೃತ್ಯವೆಸಗಿದವ. ಹಾಸನದಿಂದ ಬೆಂಗಳೂರಿಗೆ ಹೊರಟಿದ್ದ ಯುವತಿ ಬಸ್ಸಿನಲ್ಲಿ ಸೀಟುಗಳೆಲ್ಲಾ ಭರ್ತಿಯಾಗಿದ್ದರಿಂದ ಕಂಡಕ್ಟರ್ ಪಕ್ಕ ಕುಳಿತಿದ್ದಾಳೆ.

ಬಸ್ ಕುಣಿಗಲ್ ಬಳಿ ಸಂಚರಿಸುವಾಗ ಲೈಟ್ ಆಫ್ ಆಗಿದ್ದನ್ನು ಗಮನಿಸಿದ ಕಂಡಕ್ಟರ್, ಯುವತಿಯ ಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾನೆ.

ಆತನ ಅಸಭ್ಯ ವರ್ತನೆಯಿಂದ ರೋಸಿ ಹೋದ ಯುವತಿ ಕಿರುಚಾಡಿ ಸಹಪ್ರಯಾಣಿಕರಿಗೆ ತಿಳಿಸಿದ್ದಾಳೆ. ಕೂಡಲೇ ಪ್ರಯಾಣಿಕರು ಯುವತಿಯ ನೆರವಿಗೆ ಧಾವಿಸಿದ್ದು, ಕಂಡಕ್ಟರ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಕಂಡಕ್ಟರ್ ನನ್ನು ವಶಕ್ಕೆ ಪಡೆದಿದ್ದು, ಯುವತಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...