alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕು ರಕ್ಷಿಸಲು ಬಾಲಕನ ಸಾಹಸ

ತುಮಕೂರು: ಬೆಕ್ಕು ರಕ್ಷಿಸಲು ಹೋದ ಬಾಲಕನೊಬ್ಬ ಬಾವಿಗೆ ಹಾರಿದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

ಮುಖ್ಯರಸ್ತೆಯ ಸಮೀಪದಲ್ಲೇ ಇರುವ, ಸುಮಾರು 30 ಅಡಿ ಆಳದ ಪಾಳು ಬಿದ್ದ ಬಾವಿಗೆ ಬೆಕ್ಕು ಬಿದ್ದಿದೆ. ಇದನ್ನು ನೋಡಿದ 15 ವರ್ಷದ ಬಾಲಕ, ಬೆಕ್ಕನ್ನು ರಕ್ಷಿಸುವ ಸಲುವಾಗಿ ತಾನೂ ಬಾವಿಗೆ ಹಾರಿದ್ದಾನೆ.

ಆದರೆ, ಮೇಲೆ ಬರುವ ಆತನ ಪ್ರಯತ್ನ ಫಲಿಸಿಲ್ಲ. ಭಯದಿಂದ ಕಿರುಚಾಡಿದ್ದು, ಆತನ ಕೂಗು ಕೇಳಿದ ಸ್ಥಳೀಯರು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಬಾಲಕ ಹಾಗೂ ಬೆಕ್ಕನ್ನು ರಕ್ಷಿಸಿದ್ದಾರೆ. ಬಾಲಕನ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...