alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟು ಬದಲಿಸಿ ಕೊಡುವುದಾಗಿ ಹೇಳಿ ಹಾಕಿದ್ದಾನೆ ಟೋಪಿ

tumakurr

ತುಮಕೂರು: 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರೂ, ಆಸ್ಪತ್ರೆ ಸೇರಿದಂತೆ ಕೆಲವು ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

ಆದರೂ, ಕೆಲವು ಆಸ್ಪತ್ರೆಯಲ್ಲಿ ಹಳೆ ನೋಟ್ ಪಡೆಯದ ಕಾರಣ, ಅನೇಕರು ಜೀವ ಕಳೆದುಕೊಂಡಿದ್ದಾರೆ. ರೋಗಿಗಳ ಸಂಬಂಧಿಕರು ಹಳೆ ನೋಟಿನ ಕಾರಣಕ್ಕೆ ಹೈರಾಣಾಗಿದ್ದಾರೆ. ತುಮಕೂರಿನಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಲು ಅವರ ಸಂಬಂಧಿ ತಂದಿದ್ದ ಹಳೆಯ ನೋಟುಗಳನ್ನು ಬದಲಿಸಿಕೊಡುವುದಾಗಿ ಹೇಳಿ ವಂಚಕನೊಬ್ಬ 30,000 ರೂ. ಗಳಿಗೆ ಟೋಪಿ ಹಾಕಿದ್ದಾನೆ.

ತುಮಕೂರಿನ ಖಾಸಗಿ ಆಸ್ಪತ್ರೆಗೆ ಬಂದಿದ್ದ ಆಂಧ್ರಪ್ರದೇಶದ ಕಾಟಪ್ಪ ಹಣ ಕಳೆದುಕೊಂಡವರು. ಅವರ ಸಹೋದರ ತಂದೆಯೊಂದಿಗೆ ಆಸ್ಪತ್ರೆಯಲ್ಲೇ ಇದ್ದು, ಕಾಟಪ್ಪನಿಗೆ ಊರಿನಿಂದ ಹಣ ತರಲು ಹೇಳಿದ್ದಾರೆ. ಮೊಬೈಲ್ ನಲ್ಲಿ ಅವರು ಮಾತನಾಡುವುದನ್ನು ಕೇಳಿಸಿಕೊಂಡ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾನೆ.

ಕಾಟಪ್ಪ ತಂದ 500 ರೂ., 1000 ರೂ. ಮುಖಬೆಲೆಯ ನೋಟುಗಳನ್ನು ಬದಲಿಸಿಕೊಡುವುದಾಗಿ ಹೇಳಿ, ಹಣ ಪಡೆದು ಪರಾರಿಯಾಗಿದ್ದಾನೆ. ಹೊಸ ಬಡಾವಣೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಂಚಕನ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...