alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಫೋಟೋ ಬಳಸಿ ಬ್ಲಾಕ್ ಮೇಲ್

ತುಮಕೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಹಿಳೆಯ ಫೋಟೋಗೆ ಅಶ್ಲೀಲ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದ ಕಾಮುಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮುಕೂರಿನ ಭೀಮಸಂದ್ರದಲ್ಲಿ ನಡೆದಿದೆ.

ನೆಲಮಂಗಲದ ಮೋಹನ್ ಹಲ್ಲೆಗೆ ಒಳಗಾದವ. ಚಾಲಕನಾಗಿರುವ ಮೋಹನ್ ವಿವಾಹಿತೆಯೊಬ್ಬರನ್ನು ಪರಿಚಯಿಸಿಕೊಂಡು ಫೇಸ್ ಬುಕ್ ನಲ್ಲಿ ಮಹಿಳೆಯ ಫೋಟೋಗೆ ಅಶ್ಲೀಲ ಪದಗಳನ್ನು ಸೇರಿಸಿ ಪೋಸ್ಟ್ ಮಾಡಿದ್ದಾನೆ.

ಇವೇ ಫೋಟೋ ಬಳಸಿ ಹಣ ಕೊಡುವಂತೆ ಪೀಡಿಸಿದ್ದಾನೆ. ಈತನ ಕಿರುಕುಳದಿಂದ ಬೇಸತ್ತ ಮಹಿಳೆ ಸಹೋದರನಿಗೆ ವಿಷಯ ತಿಳಿಸಿದ್ದು, ಆತನಿಗೂ ಮೋಹನ ಹಣ ಕೊಡುವಂತೆ ಪೀಡಿಸಿದ್ದಾನೆ.

ತುಮಕೂರಿನ ಭೀಮಸಂದ್ರದಲ್ಲಿ ನಡೆದ ಮದುವೆಗೆ ಬಂದಿದ್ದ ಮೋಹನ ಮಹಿಳೆಯ ಸಹೋದರನಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...