alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗ್ತಾರಾ ಭಿನ್ನಮತೀಯರು?

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸೆ. 25 ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಿದ್ದಾರೆ.

ವಿಧಾನ ಮಂಡಲದ ಉಭಯ ಸದನ ಸದಸ್ಯರು, ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಸಭೆ ಅತಿ ಪ್ರಾಮುಖ್ಯತೆ ಹೊಂದಲಿದ್ದು, ಪಕ್ಷದೊಳಗಿನ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ನಡೆಯಲಿದೆ.

ಇನ್ನೊಂದೆಡೆ ಈ ಸಭೆಗೆ ಎಷ್ಟು ಮಂದಿ ಗೈರಾಗಬಹುದೆಂಬ ಆತಂಕವೂ ಕಾಂಗ್ರೆಸ್ ನಲ್ಲಿ‌ ಮನೆ ಮಾಡಿದೆ. ಒಂದು ವೇಳೆ ಶಾಸಕರು ಸಭೆಗೆ ಗೈರಾದರೆ ಸರ್ಕಾರದ ಅಸ್ಥಿರತೆ ಯಾವ ಮಟ್ಟದ್ದು ಎಂಬುದು ಪ್ರಥಮ ಬಾರಿಗೆ ಜಗಜ್ಜಾಹೀರಾಗಲಿದೆ. ಈ ಸಭೆಗೆ ಹಾಜರಾಗಲೇಬೇಕೆಂಬ ನಿಯಮವೇನು ಇಲ್ಲ‌. ಶಾಸಕಾಂಗ ಪಕ್ಷದ ಸಭೆ, ವಿಪ್ ವ್ಯಾಪ್ತಿಗೆ ಬರುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...