alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಧಾನ ವಿಫಲ: ಅಗತ್ಯ ವಸ್ತು ಪೂರೈಕೆ ವ್ಯತ್ಯಯ

A driver dismounts his truck during a nation wide strike in Ahmadabad, India, Wednesday, July 2, 2008. Millions of truck drivers went on strike across India on Wednesday to protest rising fuel prices and road tolls, union leaders said, in a move that could paralyze much of the Indian economy. (AP Photo/Ajit Solanki)

ಬೆಂಗಳೂರು: ಲಾರಿ ಮಾಲೀಕರ ಮುಷ್ಕರ ಮುಂದುವರೆದಿದೆ. ಹೈದರಾಬಾದ್ ನಲ್ಲಿ ವಿಮೆ ನಿಯಂತ್ರಣ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲವಾಗಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾಲ್ ನೇತೃತ್ವದಲ್ಲಿ 7 ನೇ ಬಾರಿ ನಡೆದ ಸಂಧಾನ ಸಭೆ ವಿಫಲವಾಗಿದೆ. ವಾಹನ ವಿಮೆ ಮತ್ತು ಟೋಲ್ ಶುಲ್ಕ ಹೆಚ್ಚಿಸಿರುವುದನ್ನು ಹಿಂಪಡೆಯಬೇಕು ಎಂದು ಲಾರೀ ಮಾಲೀಕರು ಆಗ್ರಹಿಸಿದ್ದಾರೆ.

ಬೇಡಿಕೆ ಈಡೇರಿಸಲು ನಿರಾಕರಿಸಿದ ಹಿನ್ನಲೆಯಲ್ಲಿ ಸಭೆ ವಿಫಲವಾಗಿದೆ. ಲಾರಿ ಮಾಲೀಕರು ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯನ್ನು ಕೂಡ ನಿಲ್ಲಿಸುವ ಬಗ್ಗೆ ಯೋಜಿಸಿದ್ದಾರೆ.

ಮುಷ್ಕರ ಆರಂಭವಾಗಿ ಈಗಾಗಲೇ 8 ದಿನಗಳು ಕಳೆದಿವೆ. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ, ಹೆದ್ದಾರಿಯಲ್ಲಿಯೇ ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...