alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರಿ ಹರಿದು ಅಂಬಾಭವಾನಿ ಭಕ್ತರ ದಾರುಣ ಸಾವು

ಬೀದರ್: ಪಾದಯಾತ್ರಿಗಳ ಮೇಲೆ ಲಾರಿ ಹರಿದು, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಬೀದರ್ ಜಿಲ್ಲೆ ಹುಮ್ನಾಬಾದ್ ಹೊರವಲಯದಲ್ಲಿ ನಡೆದಿದೆ.

ಲಕ್ಷ್ಮಿವೆಂಕಟಗೌಡ ಹಾಗೂ ಗೌರಮ್ಮ ಸಂಗಮೇಶ್ ಮೃತಪಟ್ಟವರು. ತೆಲಂಗಾಣದ ವಿಕಾರಾಬಾದ್ ನಿಂದ ಹುಮ್ನಾಬಾದ್ ಮೂಲಕ, 15 ಮಂದಿ ಅಂಬಾಭವಾನಿ ದರ್ಶನಕ್ಕೆ ಪಾದಯಾತ್ರೆಯಲ್ಲಿ ಹೊರಟಿದ್ದಾರೆ.

ಹುಮ್ನಾಬಾದ್ ಹೊರ ವಲಯದಲ್ಲಿ ಅತಿವೇಗವಾಗಿ ಬಂದ ಲಾರಿ ಪಾದಯಾತ್ರಿಗಳ ಮೇಲೆಯೇ ಹರಿದಿದೆ. ಇಬ್ಬರು ಸಾವು ಕಂಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅಪಘಾತದ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಹುಮ್ನಾಬಾದ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...