alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಅವಮಾನ ಮಾಡಿದರೆಂಬ ವಿಚಾರಕ್ಕೆ ಸಮೀರ್ ಆಚಾರ್ಯ ಕೊಟ್ಟ ಸಮಜಾಯಿಷಿ ಏನು…?

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪತ್ನಿ ಜತೆ ನಡೆದುಕೊಂಡ ರೀತಿ ಈಗ ಭಾರೀ ಟ್ರೋಲ್ ಗೆ ಕಾರಣವಾಗಿದೆ. ಈ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಆಚಾರ್ಯ, ಸಮಜಾಯಿಷಿ ನೀಡುವ ಯತ್ನ ಮಾಡಿದ್ದಾರೆ.

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ನಿರೂಪಕ ರಮೇಶ್ ಅರವಿಂದ್, ರಾಮಾಯಣದ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾ, ಶೂರ್ಪನಖಿ ತಾಯಿ ಯಾರು? ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಸಮೀರ್ ಆಚಾರ್ಯ ’ದಿತಿ’ ಎಂದು ಹೇಳುತ್ತಾರೆ.

ಇದೇ ಉತ್ತರವನ್ನು ಸಮೀರ್ ಆಚಾರ್ಯ ಖಚಿತವೆಂಬಂತೆ ನುಡಿದಾಗ ಸಮೀರ್ ಕೊಟ್ಟ ಉತ್ತರವನ್ನು ಲಾಕ್ ಮಾಡಲಾಗುತ್ತದೆ. ಈ ವೇಳೆ ನಿರೂಪಕ ರಮೇಶ್ ಅರವಿಂದ್, ಸಮೀರ್ ಪತ್ನಿ ಬಳಿ ಉತ್ತರ ಕೇಳಿದಾಗ ಅವರು ’ಕೈಕಸಿ’ ಎನ್ನುತ್ತಾರೆ. ಇದಕ್ಕೆ ಸಮೀರ್ ಆಚಾರ್ಯ, ರಾಮಾಯಣ ಓದಿದ್ದು ನಾನಾ, ನೀನಾ? ಪ್ರವಚನ ಮಾಡುವಾಗ ನಿದ್ದೆ ಮಾಡಿದ್ರೇ ಹೀಗೆ ಆಗೋದು ಎನ್ನುತ್ತಾರೆ. ಆದರೆ ಸಮೀರ್ ಪತ್ನಿ ನೀಡಿದ ಉತ್ತರವೇ ಸರಿಯಾಗಿಬಿಟ್ಟಿರುತ್ತದೆ. 

ಕಾರ್ಯಕ್ರಮದಲ್ಲಿ ಸಮೀರ್ ಆಚಾರ್ಯ, ಪತ್ನಿ ಜತೆ ನಡೆದುಕೊಂಡ ಈ ನಡವಳಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗ್ರಾಸವಾಗಿದೆ. ಈ ಹಿನ್ನಲೆಯಲ್ಲಿ ಫೇಸ್ ಬುಕ್ ನಲ್ಲಿ ಸಮಜಾಯಿಷಿ ನೀಡಿದ ಸಮೀರ್ ಆಚಾರ್ಯ, ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ.

ತಾವು ಇಷ್ಟು ದಿನ ಮಾಡಿದ ಒಳ್ಳೆಯ ಕೆಲಸ, ಪಾಠ-ಪ್ರವಚನಗಳು ಇಷ್ಟು ಟ್ರೋಲ್ ಆಗಿಲ್ಲ, ರೈತರಿಗಾಗಿ, ಮಹದಾಯಿ ನದಿಗಾಗಿ ನಡೆಸಿದ ಹೋರಾಟ, ಸೈನಿಕರ ಮಕ್ಕಳ ಶಿಕ್ಷಣಕ್ಕಾಗಿ ಪಟ್ಟ ಪರಿಶ್ರಮ….ಇದಾವೂದು ಇಷ್ಟು ಶೇರ್ ಆಗಿಲ್ಲ, ತಾವು ಮಾಡಿದ ಯಾವ ಒಳ್ಳೆಯ ಕೆಲಸದ ಬಗ್ಗೆಯೂ ಚರ್ಚೆಯಾಗಿಲ್ಲ. ಈಗ ಕೋಟ್ಯಾಧಿಪತಿ ಕಾರ್ಯಕ್ರಮದ ಒಂದು ವಿಚಾರ ಮಾತ್ರ ಇಷ್ಟೊಂದು ಚರ್ಚೆಗೆ ಕಾರಣವಾಗಿದೆ ಇದು ಸರಿಯಲ್ಲ ಎಂದು ಈ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪತ್ನಿ ಹಾಗೂ ತನ್ನ ನಡುವಿನ ಅದಮ್ಯ ಪ್ರೀತಿ-ಗೌರವದ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...