alex Certify
ಕನ್ನಡ ದುನಿಯಾ       Mobile App
       

Kannada Duniya

ದುರಾದೃಷ್ಟ ಎಂದರೆ ಇವರದ್ದೇ ನೋಡಿ

Apache-RTR-180-ABS

ಕೆಲವು ಸಂದರ್ಭದಲ್ಲಿ ಆಕಸ್ಮಿಕವಾಗಿ ತೊಂದರೆಗೊಳಗಾದರೆ, ಮೇಲಿಂದ ಮೇಲೆ ತೊಂದರೆ ಕಾಣಿಸಿಕೊಂಡು ಬಿಡುತ್ತವೆ. ದುರಾದೃಷ್ಟವೆಂಬಂತೆ ಪದೇ ಪದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಇಲ್ಲೊಬ್ಬ ಯುವಕನ ಪರಿಸ್ಥಿತಿಯೂ ಇದೇ ರೀತಿ ಆಗಿದೆ.

ಬೆಂಗಳೂರಿನ ನಿವಾಸಿ 26 ವರ್ಷದ ಯುವಕ ಹೊಸ ವರ್ಷದಂದು ಹೊಸ ಅಪಾಚೆ ಆರ್.ಟಿ.ಆರ್. ಬೈಕ್ ಖರೀದಿಸಿದ್ದರು. ಆ ಬೈಕ್ ನಲ್ಲಿ ಕಳೆದ ಭಾನುವಾರ ತಮ್ಮ ಸ್ನೇಹಿತನ ಜೊತೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ನಾಗರಬಾವಿ ಸಮೀಪ ಅಪಘಾತವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಯುವಕನ  ಕೈ ಮುರಿದಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇತ್ತ ಅಪಘಾತದ ಸ್ಥಳದಿಂದ ಅವರ ಬೈಕ್ ಅನ್ನು ಯಾರೋ ಅಪಹರಿಸಿದ್ದಾರೆ. ಬೈಕ್ ಕಳುವಾಗಿರುವ ಬಗ್ಗೆ ದೂರು ಕೊಡಲು ಹೋದರೆ ಪೊಲೀಸರು ಸ್ಪಂದಿಸಿಲ್ಲ ಎನ್ನಲಾಗಿದೆ.

ಕೈ ಮುರಿದುಕೊಂಡಿರುವ ಯುವಕ ಪೊಲೀಸ್ ಠಾಣೆಗೆ ಹೋಗಿದ್ದು, ತಮ್ಮ ಬೈಕ್ ಕಳುವಾಗಿದೆ ಎಂದು ತಿಳಿಸಿದ್ದಾರೆ. ಇದು ತಮ್ಮ ಠಾಣೆ ವ್ಯಾಪ್ತಿಗೆ ಬರಲ್ಲ, ಮೊದಲು ನೀವು ಅಪಘಾತದ ಕೇಸು ದಾಖಲಿಸಿಕೊಂಡು ಬನ್ನಿ ಎಂದೆಲ್ಲಾ ಹೇಳುತ್ತಿದ್ದು, ಠಾಣೆಯಿಂದ ಠಾಣೆಗೆ ಅಲೆದಾಡಿ ಹೈರಾಣಾಗಿರುವ ಯುವಕ ದಿಕ್ಕು ತೋಚದಂತಾಗಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...