alex Certify
ಕನ್ನಡ ದುನಿಯಾ       Mobile App
       

Kannada Duniya

ದರ್ಶನ್ ಗೆ ಬಲಗೈ ಮೂಳೆ ಮುರಿತ; ರಾಡ್ ಅಳವಡಿಸಿ, 24 ಹೊಲಿಗೆ ಹಾಕಿದ ವೈದ್ಯರು

ಮೈಸೂರು: ಕಾರು ಅಪಘಾತದಲ್ಲಿ ಕೈ ಮೂಳೆ ಮುರಿದುಕೊಂಡಿರುವ ನಟ ದರ್ಶನ್ ಅವರಿಗೆ ರಾಡ್ ಅಳವಡಿಸಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಸಧ್ಯ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯ ವೈದ್ಯರು ದರ್ಶನ್ ಅವರ ಎಕ್ಸ್ ರೇ ಬಿಡುಗಡೆ ಮಾಡಿದ್ದಾರೆ. ಅಪಘಾತದಿಂದಾಗಿ ದರ್ಶನ್ ಬಲಗೈ ಮೂಳೆ ಮುರಿದಿದ್ದು, ಕೈಗೆ ರಾಡ್ ಅಳವಡಿಸಿ, 24 ಹೊಲಿಗೆಗಳನ್ನು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ದರ್ಶನ್ ಅವರನ್ನು ಶೀಘ್ರವೇ ವಾರ್ಡ್ ಗೆ ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿರುವ ವೈದ್ಯರು, 15 ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...