alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಿಗೆ ನೌಕರರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಬಲವಂತದ ವರ್ಗಾವಣೆ ಇಲ್ಲ ಎಂದು ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ತಿಳಿಸಿದ್ದಾರೆ.

ನೌಕರರ ಅಂತರ ನಿಗಮ ವರ್ಗಾವಣೆಯ ಗೊಂದಲವನ್ನು ನಿವಾರಿಸಲಾಗಿದೆ. ನಿಯೋಜಿನೆಗೊಂಡಿರುವ ನಿಗಮಗಳಿಗೆ ಅವರನ್ನು ಬಲವಂತವಾಗಿ ಕಳುಹಿಸುವುದಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಬಿ.ಎಂ.ಟಿ.ಸಿ.ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಕರ್ನಾಟಕ ಜಿಲ್ಲೆಗಳ ನೌಕರರು ಹತ್ತಿರದ ಜಿಲ್ಲೆಗಳಿಗೆ ವರ್ಗಾವಣೆ ಬಯಸಿದ್ದರು. ಅವರಲ್ಲಿ ಕೆಲವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಯಾಗಿದ್ದರಿಂದ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಹೋಗದೇ ಬಿ.ಎಂ.ಟಿ.ಸಿ.ಯಲ್ಲೇ ಉಳಿಯಲು ವರ್ಗಾವಣೆಗೊಂಡಿರುವ ನೌಕರರು ಬಯಸಿದ್ದು, ಅಂತಹವರನ್ನು ಬಲವಂತವಾಗಿ ವರ್ಗಾವಣೆ ಮಾಡುವುದಿಲ್ಲ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರ್ಗಾವಣೆ ಪಡೆದು ನಿಯೋಜಿತ ಸ್ಥಳಗಳಿಗೆ ಹೋಗಲು ಇಚ್ಚಿಸುವ ನೌಕರರಿಗೆ ಮಾತ್ರ ಕಳಿಸಿಕೊಡುವಂತೆ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...