alex Certify
ಕನ್ನಡ ದುನಿಯಾ       Mobile App
       

Kannada Duniya

18 ದಿನದಲ್ಲೇ ಸಿ. ಶಿಖಾ ಮತ್ತೆ ವರ್ಗಾವಣೆ

shika

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಯಾದ 18 ದಿನಗಳ ಅಂತರದಲ್ಲಿ ಸಿ.ಶಿಖಾ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ಅವರು ಆಗಸ್ಟ್ 10 ರಂದು ವರ್ಗಾವಣೆಗೊಂಡಿದ್ದರು.

ತಮಗೆ ಬೆದರಿಕೆ ಹಾಕಿದ್ದ ಮುಖ್ಯಮಂತ್ರಿ ಆಪ್ತ ಮರಿಗೌಡ ವಿರುದ್ಧ, ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ದೂರು ನೀಡಿ, ಜೈಲಿಗೆ ಹೋಗಲು ಕಾರಣರಾಗಿದ್ದರು. ಈ ಬೆಳವಣಿಗೆಗಳ ನಂತರ ಶಿಖಾ ಅವರನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಆಗಸ್ಟ್ 10 ರಂದು ಅವರನ್ನು ವರ್ಗಾವಣೆ ಮಾಡಿ ಹೊರಡಿಸಿದ್ದ ಆದೇಶ ರದ್ದುಪಡಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ.

ಶಿಖಾ ಸೇರಿದಂತೆ 9 ಐ.ಎ.ಎಸ್. ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ ಸಾವಿತ್ರಿ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಎಂ ಲಕ್ಷ್ಮಿ ನಾರಾಯಣ, ಪಶು ಸಂಗೋಪನೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಆರ್.ಉಮಾಶಂಕರ್ ಅವರನ್ನು ವರ್ಗಾಯಿಸಲಾಗಿದೆ.

ಸಹಕಾರ ಇಲಾಖೆ ಕಾರ್ಯದರ್ಶಿಯಾಗಿ ಪಿ.ಎಸ್. ವಸ್ತ್ರದ್, ಇ-ಆಡಳಿತ, ಡಿ.ಪಿ.ಎ.ಆರ್. ಸಿಇಓ ಆಗಿ ದರ್ಪಣ್ ಜೈನ್, ಅಬಕಾರಿ ಆಯುಕ್ತರಾಗಿ ಎಂ.ಮಂಜುನಾಥ್ ನಾಯ್ಕ್, ಕೆ.ಎಸ್.ಎಸ್.ಐ.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾಗಿ ಹೇಮಾಜಿ ನಾಯಕ್, ಗ್ರಾಮೀಣ ನೀರು ಪೂರೈಕೆ ಆಯುಕ್ತರಾಗಿ ವಿಫುಲ್ ಬನ್ಸಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...