alex Certify
ಕನ್ನಡ ದುನಿಯಾ       Mobile App
       

Kannada Duniya

ಹಳಿ ತಪ್ಪಿದ ಪ್ಯಾಸೆಂಜರ್ ರೈಲು-ಇಬ್ಬರಿಗೆ ಗಾಯ

train-representational-imageಬೀದರ್ ಜಿಲ್ಲೆ ಬಾಲ್ಕಿ ತಾಲೂಕಿನ ಕಾಳಗಾಪುರ-ಸಂಗಮ ರೈಲು ನಿಲ್ದಾಣಗಳ ನಡುವೆ ಔರಾಂಗಾಬಾದ್-ಹೈದರಾಬಾದ್ ಸೂಪರ್ ಫಾಸ್ಟ್ ರೈಲು ಹಳಿ ತಪ್ಪಿದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

ಬೆಳಿಗ್ಗೆ 4 ಗಂಟೆ ಸುಮಾರಿಗೆ ಕಾಳಗಾಪುರ-ಸಂಗಮ ರೈಲು ನಿಲ್ದಾಣಗಳ ನಡುವೆ ರೈಲಿನ ಇಂಜಿನ್ ಹಾಗೂ ಎರಡು ಬೋಗಿಗಳು ಹಳಿ ತಪ್ಪಿದ್ದು, ಗಾಯಗೊಂಡವರನ್ನು ಬಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ರೈಲು ಹಳಿ ತಪ್ಪಿದ ಸ್ಥಳಕ್ಕೆ ಧಾವಿಸಿದ ರೈಲ್ವೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...