alex Certify
ಕನ್ನಡ ದುನಿಯಾ       Mobile App
       

Kannada Duniya

ಟೌನ್ಹಾಲ್ ಮುಂದೆ ಪ್ರತ್ಯಕ್ಷನಾದ ಯಮ…!

ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಇದ್ದಕ್ಕಿದ್ದಂತೆ ಯಮ ಪ್ರತ್ಯಕ್ಷನಾಗಿ ವಾಹನ ಸವಾರರರಿಗೆ ಆತಂಕ ಹುಟ್ಟಿಸಿದ್ದಾನೆ. ಅಷ್ಟೇ ಅಲ್ಲ ಕೆಲ ವಾಹನ ಸವಾರರಿಗೆ ಯಮ ಬುದ್ಧಿವಾದವನ್ನೂ ಹೇಳಿದ್ದಾನೆ.

ಇದೇನಪ್ಪಾ ಯಮ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳೋಕೆ ಸಾಧ್ಯಾನಾ ಅಂತ ಶಾಕ್ ಆಗಬೇಡಿ. ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಸುರಕ್ಷಿತ ವಾಹನ ಚಾಲನೆ ಬಗ್ಗೆ ಜಾಗೃತಿ ಮೂಡಿಸೋಕೆ , ಬೆಂಗಳೂರಿನ ಅಲಸೂರು ಗೇಟ್ ಸಂಚಾರಿ ಪೊಲೀಸರು ಮಾಡಿದ ಪ್ಲಾನ್ ಇದು.

ವೀರೇಶ್ ಎಂಬ ರಂಗಭೂಮಿ ನಟರು ಯಮನ ವೇಷಧಾರಿಯಾಗಿ ಟೌನ್ಹಾಲ್ ಮುಂಭಾಗದಲ್ಲಿ ಕಾಣಿಸಿಕೊಂಡರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ಯಮರೂಪಧಾರಿ ಬುದ್ಧಿವಾದ ಹೇಳಿದ್ರು. ಈ ಮೂಲಕ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಬಳಕೆಯ ಬಗ್ಗೆ ಅರಿವು ಮೂಡಿಸಿದರು. ಅಲ್ಲದೇ ಸಂಚಾರಿ ಪೊಲೀಸರು ಕೂಡ ವಾಹನ ಸವಾರರಿಗೆ ಗುಲಾಬಿಯನ್ನು ನೀಡಿ ಸುರಕ್ಷತೆಯ ಪಾಠ ಮಾಡಿದ್ರು.

ಈ ವಿಭಿನ್ನ ಕಾರ್ಯಕ್ರಮದ ಬಗ್ಗೆ ಮಾತನಾಡಿಸಿ ಡಿಸಿಪಿ ಅನುಪಮ್ ಅಗರ್ವಾಲ್, ಜುಲೈ ತಿಂಗಳು ರಸ್ತೆ ಸುರಕ್ಷತಾ ಮಾಸಾಚರಣೆಯಾಗಿದೆ. ಇಂತಾ ಅನೇಕ ಕಾರ್ಯಕ್ರಮಗಳ ಮೂಲಕ ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದಾಗಿ ತಿಳಿಸಿದರು. ಕೇವಲ ವಾಹನ ಸವಾರರು ಮಾತ್ರವಲ್ಲ. ಪಾದಚಾರಿಗಳಿಗೂ ರಸ್ತೆ ಸುರಕ್ಷತೆ ಬಗ್ಗೆ ನಿಗಾ ವಹಿಸುವಂತೆ ಮನವೊಲಿಸುವ ಕಾರ್ಯವನ್ನು ಪೊಲೀಸರು ಮಾಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಜೂನ್ ಅಂತ್ಯದ ವೇಳೆಗೆ ಸಂಭವಿಸಿರುವ 2336 ಅಪಘಾತಗಳಲ್ಲಿ 330 ಮಂದಿ ಸಾವನ್ನಪ್ಪಿದ್ದಾರೆ. 2017ರ ವರ್ಷಾಂತ್ಯಕ್ಕೆ ಸಂಭವಿಸಿದ ಅಪಘಾತಗಳ ಪೈಕಿ 609 ಜನರು ಮೃತಪಟ್ಟಿದ್ದಾರೆ. 2016ರಲ್ಲಿ 7506 ಆಕ್ಸಿಡೆಂಟ್ ಗಳು ಸಂಭವಿಸಿದ ಕಾರಣ 754 ಮಂದಿ ಇಹಲೋಕ ತ್ಯಜಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...