alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಕಿರಿಕಿರಿಗೆ ತತ್ತರಿಸಿ ಹೋದ ಸಾರ್ವಜನಿಕರು

ಬೆಂಗಳೂರು: ದಸರಾ ಸಂಭ್ರಮಕ್ಕೆ ಮನೆ ಬಿಟ್ಟು ದೂರದೂರಿನಲ್ಲಿ ಕಲಿಯುತ್ತಿರುವ, ಉದ್ಯೋಗ ಹಿಡಿದಿರುವ ಪ್ರತಿಯೊಬ್ಬರೂ ತಮ್ಮೂರಿಗೆ ಹೋಗಿದ್ದಾಯಿತು. ರಜೆ ಮುಗಿದು, ಮತ್ತೆ ಹಿಂದಿರುವಾಗ ಪ್ರತಿಯೊಬ್ಬರಿಗೂ ಸಂಚಾರ ದಟ್ಟಣೆಯ ಬಿಸಿ ತಟ್ಟಿದೆ. ನೆಲಮಂಗಲ ಮೂಲಕ ಹಾದು ಹೋಗುವ ಹೆದ್ದಾರಿ 4 ಮತ್ತು 48ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.

ಸರ್ಕಾರಿ/ಖಾಸಗಿ ಶಾಲೆ ಕಾಲೇಜುಗಳು, ಕಚೇರಿಗಳು ನಾಲ್ಕು ದಿನಗಳ ರಜೆಯ ಬಳಿಕ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಸಂಪರ್ಕ ಪಡೆಯುವ ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಿತ್ತು.

ಮೈಸೂರು ದಸರಾಗೆ ಹೋದವರು ಹಿಂದಿರುಗಿದ ಪರಿಣಾಮ ಮೈಸೂರು-ಬೆಂಗಳೂರು ರಸ್ತೆಯೂ ಜಾಂ ಆಗಿದ್ದು, ಇದನ್ನು ತಿಳಿದ ಕೆಲ ವಾಹನ ಸವಾರರು ಮದ್ದೂರು-ಕುಣಿಗಲ್ ಮಾರ್ಗವಾಗಿ ಸಂಚರಿಸಿದ ಪರಿಣಾಮ ಅಲ್ಲೂ ದಟ್ಟಣೆ ಉಂಟಾಗಿದೆ. ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ಆಂಬ್ಯುಲೆನ್ಸ್ ಗಳು ಪರದಾಡಿದರೆ, ಬಸ್ಸ್ ನಲ್ಲಿ ಸೀಟ್ ಸಿಗದೆ, ಪ್ರಯಾಣಿಕರು ಖಾಸಗಿ ಬಸ್ ಗಳ ಟಾಪ್ ಏರಿ ಪ್ರಯಾಣಿಸುವ ಪರಿಸ್ಥಿತಿಯೂ ತಲೆದೋರಿದೆ. ಸಾಮಾನ್ಯವಾಗಿ ದಿನಕ್ಕೆ 1 ಲಕ್ಷ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ 10ಲಕ್ಷಕ್ಕೂ ಅಧಿಕ ವಾಹನಗಳು ಸಂಚರಿಸಿವೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...