alex Certify
ಕನ್ನಡ ದುನಿಯಾ       Mobile App
       

Kannada Duniya

ಹುಟ್ಟುಹಬ್ಬ ಆಚರಿಸಿಕೊಳ್ಳಲು ಟೋಲ್ ಗೇಟ್ ಬಂದ್ ಮಾಡಿದ ಸಿಬ್ಬಂದಿ…!

ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಸಲುವಾಗಿ ಟೋಲ್ ಗೇಟ್ ಅನ್ನು ಬಂದ್ ಮಾಡಿ ದುರ್ಬಳಕೆ ಮಾಡಿಕೊಂಡ ನವಯುಗ ಸಿಬ್ಬಂದಿ ಮೇಲೆ ವಾಹನ ಸವಾರರು ಆಕ್ರೋಶಗೊಂಡ ಘಟನೆ ನೆಲಮಂಗಲದ ಟೋಲ್ ಗೇಟ್ ಬಳಿ ನಡೆದಿದೆ.

ಟೋಲ್ ಗೇಟ್ ಎಂದರೆ ಕಿರಿಕಿರಿ ಅನಿಸುತ್ತೆ. ಅದರ ನಡುವೆ ಸುಮಾರು ಒಂದು ಗಂಟೆ ಕಾಲ ಈ ಟೋಲ್ ಗೇಟ್ ಬಂದ್ ಮಾಡಿ ಸಿಬ್ಬಂದಿಯೊಬ್ಬರು ಹುಟ್ಟುಹಬ್ಬವನ್ನು ಆಚರಿಸಿಕೊಂಡರೆ ವಾಹನ ಸವಾರರಿಗೆ ಹೇಗಾಗಿರಬೇಡ…?

ಸಿಬ್ಬಂದಿ ಗಂಗರಾಜು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ನವಯುಗದ ಟೋಲ್ ನ ಒಂದು ಲೈನ್ ಕ್ಲೋಸ್ ಮಾಡಿದ್ದಾರೆ. ಟೋಲ್ ಅನ್ನು ದುರ್ಬಳಕೆ ಮಾಡಿಕೊಂಡ ಸಿಬ್ಬಂದಿಯ ಈ ವರ್ತನೆಗೆ ವಾಹನ ಸವಾರರು ಬೇಸರಗೊಂಡಿದ್ದಾರೆ. ಹಾಗೇ ಸಾಮಾಜಿಕ ಜಾಲತಾಣದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...