alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ನಗರದಲ್ಲಿದೆ ಶೌಚಾಲಯದ ಸಮಸ್ಯೆ

Ksrtcshimoga

ಶಿವಮೊಗ್ಗ: ಜಿಲ್ಲಾ ಕೇಂದ್ರವಾಗಿರುವ ಶಿವಮೊಗ್ಗಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಜನ ಬಂದು ಹೋಗುತ್ತಾರೆ. ಅಲ್ಲದೇ ನಗರದ ಜನಸಂಖ್ಯೆ 3 ಲಕ್ಷಕ್ಕೂ ಮೀರಿದ್ದು, ನಗರದ ಜನತೆಗೆ ಅಗತ್ಯವಾದ ಸುಲಭ ಶೌಚಾಲಯಗಳು ಇಲ್ಲ ಎಂಬ ದೂರು ಕೇಳಿಬಂದಿದೆ.

ಶಿವಮೊಗ್ಗದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವ ಕಾರಣ ನೇಚರ್ ಕಾಲ್ ಗೆ ಅರ್ಜೆಂಟ್ ಆದವರು ಕನ್ಸರ್ವೆನ್ಸಿಗಳು ಇಲ್ಲವೇ ಬಯಲನ್ನೇ ಅವಲಂಬಿಸಬೇಕಾಗಿದೆ. ಶಿವಮೊಗ್ಗದ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಇಲ್ಲದಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದೆ.

ದಿನೇ ದಿನೇ ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾ ಕೇಂದ್ರ ಶಿವಮೊಗ್ಗಕ್ಕೆ ಬಂದು ಹೋಗುವವರ ಸಂಖ್ಯೆ ಕೂಡ ಏರುಗತಿಯಲ್ಲಿದೆ. ಆದರೆ ಜನರಿಗೆ ಶೌಚಾಲಯಗಳು ಇಲ್ಲದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗುವತ್ತ ಹೆಜ್ಜೆ ಇಟ್ಟಿದೆ. ನಗರದಲ್ಲಿ ಒಂದೆರಡು ಕಡೆಗಳಲ್ಲಿ ಸುಲಭ ಶೌಚಾಲಯ ಇರುವುದು ಬಿಟ್ಟರೆ ಅತ್ಯಂತ ಜನನಿಬಿಡ ಸ್ಥಳಗಳಾದ ಹೊಳೆ ಬಸ್ ಸ್ಟಾಪ್, ಗಾಂಧಿ ಬಜಾರ್, ದುರ್ಗಿಗುಡಿ, ನೆಹರೂ ರಸ್ತೆ, ಸವಳಂಗ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಶೌಚಾಲಯ ಅಗತ್ಯವಾಗಿ ಬೇಕಾಗಿದೆ.

ಈ ಪ್ರದೇಶ, ಸ್ಥಳಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಇಲ್ಲಿಗೆ ಬರುವವರು ತಮ್ಮ ಮೂತ್ರ ವಿಸರ್ಜನೆಗೆ ಖಾಲಿ ಜಾಗ ಅಥವಾ ಕನ್ಸರ್ವೆನ್ಸಿಗಳನ್ನು ಹುಡುಕಬೇಕಾಗಿದೆ. ಇತ್ತೀಚೆಗಷ್ಟೆ ಲಕ್ಷ್ಮಿ ಚಿತ್ರಮಂದಿರದ ಬಳಿ ಸುಲಭ ಶೌಚಾಲಯ ನಿರ್ಮಿಸಿದ್ದು, ಇದೇ ಮಾದರಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಬೇಕೆಂಬುದು ಬಹುಜನರ ಒತ್ತಾಸೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...