alex Certify
ಕನ್ನಡ ದುನಿಯಾ       Mobile App
       

Kannada Duniya

1 ರೂ. ಸೀರೆ ಖರೀದಿಗೆ ಮುಗಿಬಿದ್ದ ಜನ

bidar

ಬೀದರ್: ಬೀದರ್ ನ ಸೃಷ್ಠಿ-ದೃಷ್ಟಿ ಸ್ಯಾರಿ ಸೆಂಟರ್ ಬಳಿ ಜನ ಜಾತ್ರೆಯೇ ನೆರೆದಿದೆ. ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಪೊಲೀಸರ ನೆರವನ್ನೂ ಪಡೆಯಲಾಗಿದೆ.

ಅಷ್ಟಕ್ಕೂ ಈ ಬಟ್ಟೆ ಅಂಗಡಿಗೆ ಜನ ಖರೀದಿಗೆ ಮುಗಿಬಿದ್ದಿರುವುದು ಏಕೆ ಅಂದು ಕೊಂಡಿರಾ..? ಇಲ್ಲಿ 1 ರೂಪಾಯಿಗೆ 1 ಸೀರೆ ಮಾರಾಟ ಮಾಡಲಾಗುತ್ತಿದೆ. ಹಳೆಯ 1 ರೂ ಹಾಗೂ 2 ರೂಪಾಯಿ ನೋಟಿಗೆ 1 ಸೀರೆಯನ್ನು ಮಾರುತ್ತಿದ್ದು, ಬೀದರ್ ಮಾತ್ರವಲ್ಲದೇ, ಸುತ್ತಲಿನ ಜನ ಮುಗಿಬಿದ್ದು ಸೀರೆ ಖರೀದಿಸುತ್ತಿದ್ದಾರೆ.

ಸೃಷ್ಠಿ-ದೃಷ್ಟಿ ಸ್ಯಾರಿ ಸೆಂಟರ್ ಮಾಲೀಕ ಚಂದ್ರಶೇಖರ್ ಪಸರಗೆ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದು, ನೋಟ್ ಬ್ಯಾನ್ ನಿರ್ಧಾರ ಬೆಂಬಲಿಸಿ, 1 ರೂಪಾಯಿಗೆ 1 ಸೀರೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ಡಿಸೆಂಬರ್ 16 ರಿಂದ ಸೀರೆ ಮಾರಾಟ ನಡೆಯುತ್ತಿದ್ದು, ದಿನಕ್ಕೆ 3-5 ಸಾವಿರ ಸೀರೆಗಳು ಮಾರಾಟವಾಗುತ್ತಿವೆ. 1 ಲಕ್ಷ ಸೀರೆಗಳನ್ನು ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಚಂದ್ರಶೇಖರ್ ತಿಳಿಸಿದ್ದು, 100 ರೂ., 200 ರೂ. ಬೆಲೆಯ ಸೀರೆಗಳನ್ನು 1 ರೂಪಾಯಿಗೆ ಕೊಡುತ್ತಿದ್ದಾರೆ.

ಸೂರತ್ ನಿಂದ 1 ಲಕ್ಷ ಸೀರೆ ತರಿಸಿದ್ದು, ಡಿಸೆಂಬರ್ ಕೊನೆಯವರೆಗೆ ಮಾರಾಟ ಮಾಡಲಾಗುವುದು. 1 ಸಲಕ್ಕೆ 20 ಮಹಿಳೆಯರು ಅಂಗಡಿಯಲ್ಲಿ ಸೀರೆಯನ್ನು ಆಯ್ಕೆಮಾಡಿಕೊಳ್ಳಲು ಅವಕಾಶವಿದೆ. ಜನಜಾತ್ರೆಯೇ ನೆರೆದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...