alex Certify
ಕನ್ನಡ ದುನಿಯಾ       Mobile App
       

Kannada Duniya

ಐಸಿಸ್ ಹೆಸರಲ್ಲಿ ಶಾಲಾ ಪ್ರಾಚಾರ್ಯರಿಗೆ ಬೆದರಿಕೆ ಪತ್ರ

threat

ರಾಜ್ಯದಲ್ಲಿ ಐಸಿಸ್ ಸಂಘಟನೆ ಬೇರೂರುತ್ತಿದೆ ಎಂಬ ಮಾತು ಕೇಳಿ ಬರುತ್ತಿರುವ ನಡುವೆಯೇ ಐಸಿಸ್ ಹೆಸರಿನಲ್ಲಿ ಚಿಕ್ಕೋಡಿ ಕೋಥಳಿ ಗ್ರಾಮದ ನವೋದಯ ಶಾಲೆಯ ಪ್ರಾಚಾರ್ಯ ರಮನಾಥ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ಹೌದು. ಐಸಿಸ್ ಉಗ್ರ ಸಂಘಟನೆಯ ಹೆಸರಿನಲ್ಲಿ ಈ ಬೆದರಿಕೆ ಪತ್ರ ಬಂದಿದ್ದು, ಫೆ. 13ರ ಒಳಗಾಗಿ ಇಲ್ಲಿನ ಪ್ರಾಂಶುಪಾಲರಾದ ರಮನಾಥ ಅವರು ಶಾಲೆಯಿಂದ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಬೇಕು. ಇಲ್ಲದಿದ್ದ ಪಕ್ಷದಲ್ಲಿ ಶಾಲೆಯ ಕ್ಯಾಂಪಸ್ ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಹಿಂದಿಯಲ್ಲಿ ಬರೆದ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಈ ಕುರಿತಾಗಿ ಪ್ರಾಚಾರ್ಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಡಿವೈಎಸ್ಪಿ ಬಸವರಾಜ ಅಂಗಡಿ ಮತ್ತು ಸಿಪಿಐ ಮಲ್ಲನಗೌಡ ನಾಯ್ಕರ ಭೇಟಿ ನೀಡಿ ಪರಿಶೀಲನೆ ನಡೆಸಿ, ಇದು ಸ್ಥಳೀಯರ ಕೃತ್ಯವಾಗಿದ್ದು ಯಾವುದೇ ಬೆದರಿಕೆ ಪತ್ರವಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...