alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ…! ಜಪಾನ್ ಭಾಷೆಯಲ್ಲಿ ಸಂಸ್ಕೃತ ಪದಗಳು

ಜಪಾನ್ ಮತ್ತು ಭಾರತದ ನಡುವೆ ಕೇವಲ ರಾಜತಾಂತ್ರಿಕ ಸಂಬಂಧಗಳಷ್ಟೇ ಉಳಿದಿಲ್ಲ. ಐತಿಹಾಸಿಕ ನಂಟುಗಳು ಕೂಡ ಭಾರತ ಮತ್ತು ಜಪಾನ್ ಸಂಸ್ಕೃತಿಯಲ್ಲಿ ಬೆರೆತಿದೆಯಂತೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಜಪಾನ್ ನ ರಾಯಭಾರ ಕಚೇರಿ ಸಲಹೆಗಾರರಾದ ಟಕಯುಕಿ ಕಿಟಿಗುವಾ ಈ ವಿಚಾರ ತಿಳಿಸಿದ್ದಾರೆ.

ಜಪಾನ್ ನ ಸಂಸ್ಕೃತಿಯಲ್ಲಿ ಭಾರತದ ಹಲವು ಆಚರಣೆ ಮತ್ತು ಪದ್ಧತಿಗಳು ಬೆರೆತಿರುವ ಹಲವು ಅಶ್ಚರ್ಯಕರ ಸಂಗತಿಗಳನ್ನ ಕಿಟಿಗುವ, ಗ್ರಾಜುಯೇಷನ್ ಡೇ ಸಮಾರಂಭದಲ್ಲಿ ಬೆಳಕು ಚೆಲ್ಲಿದ್ದಾರೆ.

ಜಪಾನ್ ರಾಜಧಾನಿ ಟೋಕಿಯೋ ಬಳಿ ಕಿಚಿಜಿಯೋ ಎಂಬ ನಗರವಿದೆಯಂತೆ. ಜಪಾನ್ ಭಾಷೆಯಲ್ಲಿ ಕಿಚಿಜಿಯೋ ಎಂದ್ರೆ ಲಕ್ಷ್ಮಿ ಎಂದರ್ಥ. ಕಿಚಿಜಿಯೋ ನಗರದಲ್ಲಿ ಇಂದಿಗೂ ಲಕ್ಷ್ಮಿ ದೇವಸ್ಥಾನವಿದೆ. ಅಷ್ಟೇ ಅಲ್ಲ ಜಪಾನೀ ಭಾಷೆಯ ಮೇಲೆ ಸಂಸ್ಕೃತ ಮತ್ತು ತಮಿಳಿನ ಪ್ರಭಾವವೂ ಇದೆಯಂತೆ. ಸುಮಾರು 500 ಜಪಾನೀ ಪದಗಳು ಸಂಸ್ಕೃತ ಮತ್ತು ತಮಿಳಿನಲ್ಲಿ ಪತ್ತೆಯಾಗಿದೆ ಅಂತಾರೆ ಕಿಟಿಗುವಾ.

ಜಪಾನೀಯರ ಆಹಾರ ಪದ್ಧತಿಯಲ್ಲಿ ಕೂಡ ಭಾರತೀಯ ಸಂಪ್ರದಾಯಗಳ ಛಾಯೆ ಇದೆಯಂತೆ. ಜಪಾನ್ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಐತಿಹಾಸಿಕತೆಯ ಬಗ್ಗೆ ಕಿಟಿಗುವಾ ಕನ್ನಡದಲ್ಲೇ ಭಾಷಣ ಆರಂಭಿಸಿ ವಿದ್ಯಾರ್ಥಿಗಳ ಗಮನ ಸೆಳೆದರು. ಖಾಸಗಿ ಸಂಸ್ಥೆ ಮಾಲೀಕತ್ವದ ದಯಾನಂದ ಸಾಗರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜಪಾನ್ ಭಾಷೆ ಕಲಿಸುವ ಕೋರ್ಸ್ ಆರಂಭಿಸೋದಕ್ಕೆ ಸಮಾರಂಭದಲ್ಲಿ ನಡೆದ ಒಪ್ಪಂದಕ್ಕೆ ಕಿಟಿಗುವ ಸಹಿ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...