alex Certify
ಕನ್ನಡ ದುನಿಯಾ       Mobile App
       

Kannada Duniya

ಅರ್ಧ ಆಸ್ತಿ ದಾನ ಮಾಡಿದ ನಂದನ್ ನಿಲೇಕಣಿ ನಿರ್ಧಾರಕ್ಕೆ ಮಕ್ಕಳು ಹೇಳಿದ್ದೇನು?

ಬಿಲಿಯನೇರ್ ದಂಪತಿಯಾದ ನಂದನ್ ನಿಲೇಕಣಿ ಹಾಗೂ ರೋಹಿಣಿ ನಿಲೇಕಣಿ ತಮ್ಮ ಆಸ್ತಿಯಲ್ಲಿ ಅರ್ಧದಷ್ಟನ್ನು ದಾನ ಮಾಡಿದ್ದಾರೆ. ‘ಗಿವಿಂಗ್ ಪ್ಲೆಡ್ಜ್’ ಗೆ ಆಸ್ತಿ ದಾನ ಮಾಡಲು ಸಹಿ ಹಾಕಿದ್ದಾರೆ. ತಂದೆ-ತಾಯಿಯ ನಿರ್ಧಾರವನ್ನು ಮಕ್ಕಳು ಕೂಡ ಬೆಂಬಲಿಸಿದ್ದು, ಆಸ್ತಿಗೆ ನಾವು ಮಾಲೀಕರಲ್ಲ, ಟ್ರಸ್ಟಿಗಳಾಗಿರಲು ಇಚ್ಛಿಸುತ್ತೇವೆ ಎಂದಿದ್ದಾರೆ.

ಈ ಆಸ್ತಿ ಸಂಪೂರ್ಣ ನಮ್ಮದಲ್ಲ ಎನ್ನುತ್ತಾರೆ ರೋಹಿಣಿ ನಿಲೇಕಣಿ. ಅತ್ಯಂತ ಬುದ್ಧಿವಂತರಾದ ನಂದನ್ ನಿಲೇಕಣಿ ಹಾಗೂ ಇನ್ಫೋಸಿಸ್ ಪಾಲು ಇದರಲ್ಲಿದೆ. ಜೊತೆಜೊತೆಗೆ ಅದೃಷ್ಟದಿಂದ್ಲೂ ಹಣ ನಮ್ಮನ್ನು ಅರಸಿ ಬಂದಿದೆ ಅನ್ನೋದು ಅವರ ಪ್ರಾಮಾಣಿಕ ಅಭಿಪ್ರಾಯ.

ದೇಣಿಗೆ ನೀಡಿರುವುದನ್ನು ಬಹಿರಂಗಪಡಿಸಬಾರದು ಅನ್ನೋ ನಂಬಿಕೆ ಹಲವರಲ್ಲಿದೆ. ಆದ್ರೆ ಅದು ತಪ್ಪು, ಸಮಾಜಕ್ಕೊಂದು ಉತ್ತಮ ಸಂದೇಶ ರವಾನಿಸಲು ಅದನ್ನು ಬಹಿರಂಗಪಡಿಸುವುದು ಅತ್ಯಗತ್ಯ ಅಂತಾ ರೋಹಿಣಿ ನಿಲೇಕಣಿ ಹೇಳಿದ್ದಾರೆ.

ನಂದನ್ ನಿಲೇಕಣಿ ಅವರ ಒಟ್ಟಾರೆ ಆಸ್ತಿ ಸುಮಾರು 1.7 ಬಿಲಿಯನ್ ಡಾಲರ್. ಅವರಿಗೆ ನಿಹಾರ್ ಹಾಗೂ ಜಾಹ್ನವಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅರ್ಧ ಆಸ್ತಿಯನ್ನು ಲೋಕೋಪಕಾರಕ್ಕಾಗಿ ದಾನವಾಗಿ ನೀಡುವ ನಿಲೇಕಣಿ ದಂಪತಿಯ ನಿರ್ಧಾರವನ್ನು ಮಕ್ಕಳಿಬ್ಬರೂ ಮುಕ್ತ ಮನಸ್ಸಿನಿಂದ ಬೆಂಬಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...