alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಿಂದ ಉ.ಕೊರಿಯಾಗೆ ಬುಕ್ಕಾಯ್ತು ಓಲಾ ಕ್ಯಾಬ್, ಬಿಲ್ ಎಷ್ಟು ಗೊತ್ತಾ?

ಇಂಟರ್ ನ್ಯಾಶನಲ್ ರೋಡ್ ಟ್ರಿಪ್ ಸಖತ್ ಥ್ರಿಲ್ಲಿಂಗ್ ಆಗಿರುತ್ತೆ. ಇಂಥದ್ದೊಂದು ಪ್ರವಾಸ ಮಾಡಬೇಕು ಅಂತಾ ಎಲ್ಲರೂ ಆಸೆಪಡೋದು ಸಹಜ. ಈಗ ಸುದೀರ್ಘ ಪ್ರಯಾಣಕ್ಕೆ ಕ್ಯಾಬ್ ಸೇವೆಯೂ ಇದೆ. ಆದ್ರೆ ಜೇಬು ತುಂಬಾ ದುಡ್ಡಿರಬೇಕು ಅಷ್ಟೆ.

ರೋಹಿತ್ ಮೆಂಡಾ ಎಂಬಾತ ಬೆಂಗಳೂರಿನಿಂದ ಉತ್ತರ ಕೊರಿಯಾಗೆ ಓಲಾ ಕ್ಯಾಬ್ ಬುಕ್ಕಿಂಗ್ ಮಾಡಿದ್ದ. ಬುಕ್ಕಿಂಗ್ ಅಕ್ಸೆಪ್ಟ್ ಕೂಡ ಆಗಿದೆ. ಮಾರ್ಚ್ 18ಕ್ಕೆ ಇಲ್ಲಿಂದ ಹೊರಟು, ಮಾರ್ಚ್ 23ಕ್ಕೆ ವಾಪಸ್ ಬರಲು ಸಮಯವೂ ನಿಗದಿಯಾಗಿದೆ.

ಆದ್ರೆ ಬಿಲ್ ಎಷ್ಟು ಗೊತ್ತಾ? ಬರೋಬ್ಬರಿ 1.49 ಲಕ್ಷ ರೂಪಾಯಿ. ಇದನ್ನೆಲ್ಲ ರೋಹಿತ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾನೆ. ವಾಸ್ತವದಲ್ಲಿ ಇದು ಸಾಧ್ಯಾನಾ ಅಂತ ಪ್ರಶ್ನಿಸಿದ್ದಾನೆ. ಕೂಡಲೇ ಅದಕ್ಕೆ ಉತ್ತರಿಸಿದ ಓಲಾ, ತಾಂತ್ರಿಕ ದೋಷದಿಂದ ಆದ ಬುಕ್ಕಿಂಗ್ ಅಂತಾ ಸಮಜಾಯಿಷಿ ಕೊಟ್ಟಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...