alex Certify
ಕನ್ನಡ ದುನಿಯಾ       Mobile App
       

Kannada Duniya

25 ಕೆ.ಜಿ. ಲಾಕರ್ ಕದ್ದೊಯ್ದ ಕಳ್ಳರಿಗೆ ಸಿಕ್ಕಿದ್ದು ಬರೀ 100 ರೂ…!

ಅದೃಷ್ಟ ಕೈಕೊಟ್ಟರೆ ಕಷ್ಟಪಟ್ಟು ಮಾಡಿದ ಕೆಲಸವೂ ಫಲ ನೀಡೋದಿಲ್ಲ. ಇನ್ನು ಕಳ್ಳತನ ಮಾಡಿದ್ದು ದಕ್ಕುತ್ತಾ? ಬೆಂಗಳೂರಿನಲ್ಲಿ ಇಂಥಹದೇ ಒಂದು ಘಟನೆ ನಡೆದಿದೆ. 25 ಕೆ.ಜಿ.ಲಾಕರನ್ನು ಕಳ್ಳರು ಕಷ್ಟಪಟ್ಟು ಕದ್ದೊಯ್ದಿದ್ದಾರೆ. ಇದ್ರಲ್ಲಿ ವಜ್ರಾಭರಣ ಇರಬಹುದೆಂದು ಅವರು ಊಹಿಸಿದ್ದರು. ಆದ್ರೆ ಲಾಕರ್ ಒಡೆದು ನೋಡಿದಾಗ ಕಳ್ಳರ ದಿಗ್ಭ್ರಮೆಗೊಂಡಿದ್ದಾರೆ.

ಘಟನೆ ಫೆಬ್ರವರಿ 20ರಂದು ನಡೆದಿದೆ. ಮಿಲ್ಲರ್ಸ್ ರಸ್ತೆ ನಿವಾಸಿ ಉದ್ಯಮಿ ಅಶೋಕ್ ಭಾಟಿಯಾ ಮನೆಗೆ ನುಗ್ಗಿದ ದರೋಡೆಕೋರರು ಕೆಲಸಗಾರರಿಗೆ ಹಲ್ಲೆ ನಡೆಸಿ ಬಂಗಾರ, ಬೆಳ್ಳಿ ದೋಚಲು ಮುಂದಾಗಿದ್ದಾರೆ. ಈ ಮಧ್ಯೆ ಅವರಿಗೆ ದೊಡ್ಡ ಲಾಕರ್ ಒಂದು ಕಾಣಿಸಿದೆ. ಅದ್ರಲ್ಲಿ ಮತ್ತಷ್ಟು ಹಣವಿರಬಹುದೆಂದು ದರೋಡೆಕೋರರು ಲಾಕರ್ ಹೊತ್ತೊಯ್ದಿದ್ದಾರೆ. ಆದ್ರೆ ಲಾಕರ್ ಒಡೆದು ನೋಡಿದಾಗ ಸಿಕ್ಕಿದ್ದು ಬರೀ 100 ರೂಪಾಯಿ.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಜೆ.ಪಿ.ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಅವರಿಂದ ಚಿನ್ನ, ಬೆಳ್ಳಿ, ಕಾರು, ಮೊಬೈಲ್ ವಶಕ್ಕೆ ಪಡೆದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...