alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಎದುರೇ ಕೈಚಳಕ ತೋರಿದ ಕಳ್ಳರು

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್ ನಿಲ್ದಾಣಗಳ ಮೇಲ್ಛಾವಣಿ, ಕಬ್ಬಿಣದ ಸರಳುಗಳನ್ನೇ ಕದ್ದೊಯ್ಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇಲ್ಲೊಂದು ಚಾಲಾಕಿ ಕಳ್ಳರ ಗುಂಪು ಪೊಲೀಸರ ಎದುರೇ ತಮ್ಮ ಕೈಚಳಕ ತೋರಿ, ಬಸ್ ತಂಗುದಾಣದ ಚೌಕಟ್ಟನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೂ ಪೊಲೀಸರಿಗೆ ಇವರು ಕಳ್ಳರೆಂದು ಅರಿವೆ ಬಾರದ ಘಟನೆ ಸದಾಶಿವನಗರದಲ್ಲಿ ನಡೆದಿದೆ.

ಸದಾಶಿವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದಿದ್ದು, ತಂಗುದಾಣವೊಂದು ಕಳುವಾಗಿದೆಯೆಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗಲೇ ಈ ಘಟನೆ ಕುರಿತು ಪೊಲೀಸರಿಗೆ ಅರಿವಾಗಿದೆ.

ಅಸಲಿಗೆ ಈ ತಂಗುದಾಣ 10 ವರ್ಷಗಳ ಹಿಂದೆ ಖಾಸಗಿ ಒಡೆತನದಲ್ಲಿ ನಿರ್ಮಿಸಲಾಗಿತ್ತು. ಪೊಲೀಸ್ ಠಾಣೆಯ ಸಮೀಪವೇ ಇರುವ ಈ ತಂಗುದಾಣವನ್ನು ಇತ್ತೀಚೆಗೆ ಕಳ್ಳರ ಗೊಂಪೊಂದು ಬಂದು ತಂಗುದಾಣದ ಚೌಕಟ್ಟು, ಕಬ್ಬಿಣದ ಸರಳುಗಳು, ಮೇಲ್ಛಾವಣಿಗಳನ್ನು ತೆಗೆದು, ರಾಜಾರೋಷವಾಗಿ ಲಾರಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. ಇದನ್ನೆಲ್ಲ ಗಮನಿಸುತ್ತಲೇ ಇದ್ದ ಪೊಲೀಸರು, ಬಿಬಿಎಂಪಿ ಸಿಬ್ಬಂದಿಗಳಿರಬೇಕು ಎಂದು ಸುಮ್ಮನಾಗಿದ್ದಾರೆ. ಈಗ ದೂರು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಳ್ಳರಿಗಾಗಿ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...