alex Certify
ಕನ್ನಡ ದುನಿಯಾ       Mobile App
       

Kannada Duniya

89 ರ ಹರೆಯದ ಇವರ ಉತ್ಸಾಹಕ್ಕೆ ಹೇಳಿ ಹ್ಯಾಟ್ಸಾಫ್

ಕಲಿಕೆಗೆ ವಯಸ್ಸಿಲ್ಲ. ಈ ಮಾತನ್ನು ಆಗಾಗ ಕೇಳುತ್ತಲೇ ಇರುತ್ತವೆ. ಮತ್ತು ಅದಕ್ಕೆ ತಕ್ಕ ಉದಾಹರಣೆಗಳು ದೊರಕುತ್ತಲೇ ಇರುತ್ತವೆ. ಈಗ ಇಲ್ಲಿ ಹೇಳಹೊರಟಿರುವುದು 89 ರ ಹರೆಯದ ಉತ್ಸಾಹಿ ಹಿರಿಯ ನಾಗರಿಕರೊಬ್ಬರನ್ನು ಕುರಿತು.

ಕೊಪ್ಪಳದ ಸ್ವಾತಂತ್ರ್ಯ ಹೋರಾಟಗಾರ ಶರಣಬಸವರಾಜ್ ಬಿಸರಹಳ್ಳಿ ಇದೀಗ ಪಿ.ಹೆಚ್.ಡಿ. ಮಾಡಲು ಉಮೇದು ತೋರಿರುವುದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.

ಈ ವಯಸ್ಸಿನಲ್ಲಿ ಪಿ.ಹೆಚ್.ಡಿ.? ಎಂದು ಕೇಳಿದವರೂ ಇದ್ದಾರೆ. ಆದರೆ ಯಾವ ಟೀಕೆ ಟಿಪ್ಪಣಿಗಳಿಗೂ ಜಗ್ಗದ ಶರಣಬಸವರಾಜ್ ಹಂಪಿಯ ಕನ್ನಡ ವಿವಿಯಲ್ಲಿ ಸಾಹಿತ್ಯದಲ್ಲಿ ಪಿ.ಹೆಚ್.ಡಿ. ಮಾಡಲು ಹೊರಟಿದ್ದು, ಅದರ ಪ್ರವೇಶ ಪರೀಕ್ಷೆಯನ್ನೂ ಬರೆದಾಗಿದೆ. ಈ ಮೂಲಕ ಯಾವುದೋ ಕಾರಣಗಳಿಗಾಗಿ ವಿದ್ಯಾಭ್ಯಾಸ ಮೊಟಕುಗೊಂಡು ನಂತರ ವಯಸ್ಸಿನ ನೆಪ ಹೇಳುವವರಿಗಿಂತ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇವರ ಈ ನಡೆ ಇದೀಗ ಎಲ್ಲರಿಂದಲೂ ಪ್ರಶಂಸೆಗೂ ಪಾತ್ರವಾಗಿದೆ. ಕಳೆದ ಬಾರಿ ಪ್ರವೇಶ ಪರೀಕ್ಷೆ ಬರೆದು ವಿಫಲರಾಗಿದ್ದ ಶರಣಬಸವರಾಜ್ ಈ ಬಾರಿ ಉತ್ತಮ ತಯಾರಿ ನಡೆಸಿದ್ದು, ಖಂಡಿತ ತೇರ್ಗಡೆ ಹೊಂದುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಜೊತೆಗೆ ಕನ್ನಡದಲ್ಲಿ ಕವನ ಸಂಕಲನವನ್ನು ಹೊರತರುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅವರ ಈ ಅದಮ್ಯ ಉತ್ಸಾಹಕ್ಕೆ ಹ್ಯಾಟ್ಸ್ ಆಫ್ ಮತ್ತು ಆಲ್ ದ ಬೆಸ್ಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...