alex Certify
ಕನ್ನಡ ದುನಿಯಾ       Mobile App
       

Kannada Duniya

ಕದ್ದ ಹಣದಲ್ಲೇ ಕೊಂಚ ದಾನ ಮಾಡುತ್ತಿದ್ದನಂತೆ ಈ ಕಳ್ಳ…!

ಮನೆ ಕಳ್ಳತನ ಮಾಡಿ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಮನಸ್ಸಿನ ಸಮಾಧಾನಕ್ಕೋಸ್ಕರ ಅನಾಥ ಮಕ್ಕಳಿಗೆ ದಾನ ಮಾಡುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಜೀವನ್ ಬೀಮಾನಗರ ಪೊಲೀಸರ ಅತಿಥಿಯಾಗಿದ್ದಾನೆ.

ಈತ ಕಲಾಸಿಪಾಳ್ಯ ನಿವಾಸಿ ವಿನ್ಸೆಂಟ್ ಅಲಿಯಾಸ್ ಡೇವಿಡ್(62) ಎಂಬುದಾಗಿ ತಿಳಿದುಬಂದಿದೆ. ತಮಿಳುನಾಡು ಮೂಲದ ವಿನ್ಸೆಂಟ್, ಯಾವಾಗಲೂ ಕಳ್ಳತನ ಮಾಡುತ್ತಿದ್ದರಿಂದ ಬೇಸರಗೊಂಡ ಆತನ ಪತ್ನಿ ಹಾಗೂ ಮಕ್ಕಳು ಆತನಿಂದ ದೂರವಾಗಿದ್ದಾರೆ. ಆದರೂ ತನ್ನ ಕಳ್ಳತನ ಬುದ್ದಿಯನ್ನು ಬಿಡದ ಈತ ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡಿ ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ ಕದ್ದು, ಮಾರಾಟ ಮಾಡುತ್ತಿದ್ದ. ಸಿಕ್ಕಿದ ಹಣದಲ್ಲಿ ತಮಿಳುನಾಡಿಗೆ ಹೋಗಿ ಸ್ನೇಹಿತರ ಜತೆ ಪಾರ್ಟಿ ಮಾಡುತ್ತಿದ್ದ. ಹಾಗೇ ತನ್ನ ಜೊತೆ ಹೆಂಡತಿ ಮಕ್ಕಳು ಇಲ್ಲದ ಕಾರಣ ಉಳಿದ ಹಣವನ್ನು ಚರ್ಚ್ ಗೆ ಬರುವ ಅನಾಥ ಮಕ್ಕಳ ಊಟ, ಬಟ್ಟೆಯ ಖರ್ಚಿಗೆ ಕೊಟ್ಟು ಬರುತ್ತಿದ್ದ.

ಈತ ಈ ಹಿಂದೆ ಹಲವು ಬಾರಿ ಕಳ್ಳತನ ಮಾಡಿ ಜೈಲಿಗೆ ಹೋಗಿದ್ದ, ನಂತರ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ದಂಧೆಗೆ ಇಳಿಯುತ್ತಿದ್ದ. ಇದೇ ರೀತಿ ಆತ ಮಾರ್ಚ್ 10ರಂದು ಹಳೇ ವಿಮಾನ ನಿಲ್ದಾಣ ರಸ್ತೆಯ ಮುರುಗೇಶಪಾಳ್ಯದ ಮನೆಗೆ ನುಗ್ಗಿ ಎಲ್ಇಡಿ ಟಿವಿ, ಲ್ಯಾಪ್ಟಾಪ್ ಮತ್ತು ಚಿನ್ನದ ಸರ ಕಳವು ಮಾಡಿದ್ದ. ಪೊಲೀಸರು ಸ್ಥಳದಲ್ಲಿ ದೊರೆತ ಬೆರಳಚ್ಚು ಗುರುತನ್ನು ಹಳೆ ಆರೋಪಿಗಳ ಬೆರಳಚ್ಚು ಮುದ್ರೆಗೆ ಹೋಲಿಕೆ ಮಾಡಿದಾಗ ವಿನ್ಸೆಂಟ್ ಬಗ್ಗೆ ತಿಳಿದುಬಂದಿದೆ. ನಂತರ ಆತನನ್ನು ಬಂಧಿಸಿದ ಪೊಲೀಸರು ಆತನಿಂದ 16.25 ಲಕ್ಷ ರೂ. ಮೌಲ್ಯದ 525 ಗ್ರಾಂ ಚಿನ್ನಾಭರಣ, ಟಿವಿ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...