alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರ ಸೋಗಿನಲ್ಲಿ ಬಂದವರು ಬಟ್ಟೆ ಕದ್ದೊಯ್ದರು !

theft 88442ಗ್ರಾಹಕರ ಸೋಗಿನಲ್ಲಿ ರೆಡಿಮೇಡ್ ಬಟ್ಟೆ ಅಂಗಡಿಯೊಂದಕ್ಕೆ ಬಂದ ಮೂವರು ಯುವಕರು ಅಂಗಡಿಯವರ ಗಮನ ಬೇರೆಡೆ ಇದ್ದಾಗ ಬೆಲೆ ಬಾಳುವ ಬಟ್ಟೆಗಳನ್ನು ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ಬೆಂಗಳೂರಿನ ಹೆಣ್ಣೂರು ಸಮೀಪದ ‘ಸುಮುಖ ಫ್ಯಾಶನ್ಸ್’ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಈ ಯುವಕರು ತಮಗೆ ಬೇಕಾದ ಬಟ್ಟೆಯನ್ನು ಆಯ್ಕೆ ಮಾಡುವ ನಾಟಕವಾಡಿದ್ದಾರೆ.

ಬಳಿಕ ಒಬ್ಬಾತ, ಅಂಗಡಿಯವರನ್ನು ಮಾತನಾಡಿಸುತ್ತಾ ಅವರ ಗಮನ ಬೇರೆಡೆ ಸೆಳೆದ ವೇಳೆ ಮಿಕ್ಕವರು ಬೆಲೆ ಬಾಳುವ ಬಟ್ಟೆಗಳನ್ನು ತಮ್ಮ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದು, ನಂತರ ಅಲ್ಲಿಂದ ತೆರಳಿದ್ದಾರೆ. ಅಂಗಡಿ ಮಾಲೀಕರು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಯುವಕರ ಕರಾಮತ್ತು ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...