alex Certify
ಕನ್ನಡ ದುನಿಯಾ       Mobile App
       

Kannada Duniya

ಕಳುವಾದ ಬೈಕ್ ಫೇಸ್ ಬುಕ್ ಮೂಲಕ ಪತ್ತೆ

ಚಿಂತಾಮಣಿಯಲ್ಲಿ ಕಳುವಾಗಿದ್ದ ಯಮಹ ಬೈಕ್, ಫೇಸ್ ಬುಕ್ ಸಹಾಯದಿಂದ ದೊಡ್ಡಬಳ್ಳಾಪುರದಲ್ಲಿ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.

ಚಿಂತಾಮಣಿಯ ಮಂಜುನಾಥ್ ಅವರಿಗೆ ಸೇರಿದ್ದ ಯಮಹಾ ಬೈಕ್ ಕಳುವಾಗಿತ್ತು. ಮನೆ ಮುಂದೆ ನಿಲ್ಲಿಸಿದ್ದ ಬೈಕನ್ನ ಮುಂಜಾನೆ 4 ಗಂಟೆ ಸಮಯದಲ್ಲಿ ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಮಂಜುನಾಥ್ ಫೇಸ್ ಬುಕ್ ಅಕೌಂಟ್ ನಲ್ಲಿ ಬೈಕ್ ಫೋಟೋ ಹಾಕಿ, ಈ ಬೈಕ್ ಕಳುವಾಗಿದೆ ಎಲ್ಲಿಯಾದರೂ ಕಂಡರೆ ಈ ನಂಬರಿಗೆ ಮಾಹಿತಿ ನೀಡಿ ಎಂದು ಕೋರಿದ್ದರು.

ಕಳ್ಳರು ಕದ್ದೊಯ್ದಿದ್ದ ಬೈಕ್ ಗೆ ದೊಡ್ಡಬಳ್ಳಾಪುರದ ಬಳಿ ಪೆಟ್ರೋಲ್ ಖಾಲಿಯಾಗಿದ್ದು, ಕಳ್ಳರು ಬೈಕನ್ನು ತಳ್ಳಿಕೊಂಡು ಹೋಗುತ್ತಿದ್ದರು. ಈ ವೇಳೆ ಸಂತೋಷ್ ಎಂಬುವವರು ಈ ಬೈಕ್ ನ್ನು ಗಮನಿಸಿದ್ದಾರೆ. ಅಲ್ಲದೇ ಫೇಸ್ ಬುಕ್ ನಲ್ಲಿ ಬೈಕ್ ಬಗ್ಗೆ ಹಾಕಿದ್ದ ಮಾಹಿತಿಯನ್ನು ನೋಡಿದ್ದರು. ತಕ್ಷಣ ಸ್ಥಳೀಯರೊಂದಿಗೆ ಬೈಕ್ ಸಮೇತ ಇಬ್ಬರನ್ನ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಟ್ಟಾರೆ ಫೇಸ್ ಬುಕ್ ಸಹಾಯದಿಂದ ಕಳುವಾಗಿದ್ದ ಬೈಕ್ ಮತ್ತೆ ಸಿಕ್ಕಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...