alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿ ಮನೆಯಲ್ಲಿ ಹಣ ಕದ್ದ ಕಳ್ಳಿ ಸಿಕ್ಕಿ ಬಿದ್ದಿದ್ದೆಲ್ಲಿ…?

ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, ಲಾಕರ್ ನಲ್ಲಿದ್ದ ಲಕ್ಷಾಂತರ ಹಣವನ್ನು ಎಗರಿಸಿದ್ದು, ಸಿಸಿ ಟಿವಿ ಕಾರಣಕ್ಕೆ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಲಾವೆಲ್ಲೆ ರಸ್ತೆಯಲ್ಲಿರುವ ಉದ್ಯಮಿ ಸಂದೀಪ್ ಮೈನಿ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಎಂಬ ಮಹಿಳೆ ಕಳೆದ ಕೆಲ ತಿಂಗಳಿಂದ ಅವರ ಮನೆಯ ಲಾಕರ್ ನಿಂದ 7 ರಿಂದ 10 ಲಕ್ಷ ರೂಪಾಯಿ ಎಗರಿಸಿದ್ದಳೆನ್ನಲಾಗಿದೆ.

ತಮ್ಮ ವೃದ್ಧ ತಂದೆ, ತಾಯಿಯನ್ನು ನೋಡಿಕೊಳ್ಳಲು ಗೀತಾಳನ್ನು ನೇಮಿಸಿಕೊಂಡಿದ್ದ ಸಂದೀಪ್ ಮೈನಿ ಹಣ ಕಳವಾಗುತ್ತಿರುವುದು ಗಮನಕ್ಕೆ ಬಂದ ಬಳಿಕ, ಲಾಕರ್ ದೃಶ್ಯಗಳು ಸೆರೆಯಾಗುವಂತೆ ಸಿಸಿ ಟಿವಿಯನ್ನು ಅಳವಡಿಸಿದ್ದಾರೆ. ಇದಾದ ಮರುದಿನವೇ ಮತ್ತೆ ಹಣ ಕಳುವಾಗಿದ್ದು, ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದ ವೇಳೆ ಮನೆ ಕೆಲಸದಾಕೆಯ ಕೃತ್ಯ ಬಯಲಾಗಿದೆ. ಈಗ ಆಕೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...