alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಲ್ಲೂ ಬಂತು ಬಿಟ್ ಕಾಯಿನ್ ಉಡುಗೊರೆ…!

ಪ್ರಶಾಂತ್ ಶರ್ಮಾ ಹಾಗೂ ನೀತಿಶ್ರೀ ತಮ್ಮ ಮದುವೆಯಲ್ಲಿ ಉಡುಗೊರೆಯಾಗಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಅನ್ನು ಕೇಳಬೇಕೆಂದು ನಿರ್ಧರಿಸಿದ್ರು. ಬೆಂಗಳೂರಿನ ನಿವಾಸಿಗಳಾದ ಇವರು ಜೊತೆಯಾಗಿ ಡಿಜಿಟಲ್ ಸ್ಟಾರ್ಟಪ್ ಒಂದನ್ನು ಆರಂಭಿಸಿದ್ದಾರೆ.

ಅವರ ಹಲವು ಸ್ನೇಹಿತರು ಕೂಡ ಟೆಕ್ನಾಲಜಿ ಕಂಪನಿಗಳಲ್ಲೇ ಕೆಲಸ ಮಾಡ್ತಿದ್ದಾರೆ. ಹಾಗಾಗಿ ಮದುವೆಗೂ ಟೆಕ್ನಾಲಜಿಯ ಸ್ಪರ್ಷವಿದ್ರೆ ಚೆನ್ನ ಎಂದು ಪ್ರಶಾಂತ್ ಹಾಗೂ ನೀತಿಗೆ ಅನಿಸಿತ್ತು. ಡಿಸೆಂಬರ್ 9ರಂದು ಇವರ ಮದುವೆ ನೆರವೇರಿದೆ. ಆದ್ರೆ 4 ದಿನಗಳ ಮುನ್ನ ಬಿಟ್ ಕಾಯಿನ್ ಗಳನ್ನು ಖರೀದಿಸದಂತೆ ಹೂಡಿಕೆದಾರರನ್ನು ಆರ್ ಬಿ ಐ ಎಚ್ಚರಿಸಿತ್ತು.

ಆರ್ ಬಿ ಐ ಎಚ್ಚರಿಕೆ ಮದುವೆಗೆ ಬಂದಿದ್ದ ಅತಿಥಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 200 ಅತಿಥಿಗಳಲ್ಲಿ 15 ಮಂದಿ ಮಾತ್ರ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿದ್ದಾರೆ. ಉಳಿದವರೆಲ್ಲ ನವದಂಪತಿಯ ಆಸೆಯಂತೆ ಬಿಟ್ ಕಾಯಿನ್ಸ್ ಕೊಟ್ಟಿದ್ದಾರೆ.

ಪ್ರಶಾಂತ್ ಹಾಗೂ ನೀತಿಗೆ 100,000 ಮೌಲ್ಯದ ಬಿಟ್ ಕಾಯಿನ್ಸ್ ಉಡುಗೊರೆಯಾಗಿ ಸಿಕ್ಕಿದೆ. ಈ ಬಿಟ್ ಕಾಯಿನ್ಸ್ ಗಳಿಂದ ಸಮಾಜಕ್ಕೆ ಒಳಿತು ಮಾಡಬೇಕೆಂಬುದು ಅವರ ಉದ್ದೇಶ. ಬಿಟ್ ಕಾಯಿನ್ಸ್ ಮಾರಾಟ ಮಾಡಿ ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಗುರಿ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...