alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಬಿ.ಎಸ್.ವೈ-ಸಿಎಂ ನಡುವಣ ಟ್ವೀಟ್ ಸಮರದ ಸೀಕ್ರೆಟ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಇಬ್ಬರೂ ಕರ್ನಾಟಕದ ಖಡಕ್ ರಾಜಕಾರಣಿಗಳು. ಮೊದಲೆಲ್ಲಾ ಇವರ ಮಧ್ಯೆ ಮಾತಿನ ಸಮರ ನಡೆಯುತ್ತಿತ್ತು. ಈಗ ಟ್ವೀಟ್ ಸಮರ ಜೋರಾಗಿದೆ. ಸಾಮಾಜಿಕ ತಾಣಗಳಲ್ಲಿ ಹ್ಯಾಶ್ ಟ್ಯಾಗ್ ಜಟಾಪಟಿ ನಡೀತಿದೆ.

ಈ ರೀತಿ ಟ್ವಿಟ್ಟರ್ ಗೇಮ್ ಹೆಚ್ಚಾಗಲು ಕಾರಣ ಯಡಿಯೂರಪ್ಪ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳನ್ನು ಮ್ಯಾನೇಜ್ ಮಾಡಲು, ಕ್ಯಾಂಪೇನ್ ಗಾಗಿ ತಂಡವೊಂದನ್ನು ಹೈರ್ ಮಾಡಿಕೊಂಡಿದ್ದಾರೆ. ಸುಮಾರು 15 ರಾಜ್ಯಗಳಲ್ಲಿ ರಾಜನೀತಿ ಎಂಬ ಈ ಗ್ರೂಪ್, ರಾಜಕಾರಣಿಗಳ ಜಾಲತಾಣಗಳನ್ನು ಮೆಂಟೇನ್ ಮಾಡ್ತಿದೆಯಂತೆ.

ಮೂರು ತಿಂಗಳುಗಳ ಹಿಂದಷ್ಟೆ 25 ಪ್ರೊಫೆಷನಲ್ ಗಳ ತಂಡ ಯಡಿಯೂರಪ್ಪರ ಟೀಮ್ ಸೇರಿಕೊಂಡಿದೆ. ಪ್ರತಿನಿತ್ಯ ರಾಜಕೀಯದಲ್ಲಿ ಏನೇನಾಗ್ತಿದೆ ಅನ್ನೋದನ್ನು ಗಮನಿಸಿ ಅದಕ್ಕೆ ತಕ್ಕಂತೆ ಟ್ವೀಟ್ ಮಾಡೋದು ಇವರ ಕೆಲಸ. ಇನ್ನೊಂದೆಡೆ ಕಾಂಗ್ರೆಸ್ ಜಾಲತಾಣಗಳ ನಿರ್ವಹಣೆ ಹೊಣೆಯನ್ನು ಸಿದ್ದರಾಮಯ್ಯರ ಪುತ್ರ ಡಾ. ಯತೀಂದ್ರ ವಹಿಸಿಕೊಂಡಿದ್ದಾರಂತೆ.

ಯಡಿಯೂರಪ್ಪರ ಟ್ವಿಟ್ಟರ್, ಫೇಸ್ಬುಕ್, ಲಿಂಕ್ಡ್ ಇನ್, ಇನ್ ಸ್ಟಾಗ್ರಾಮ್, ಯುಟ್ಯೂಬ್, ಪಿಂಟರೆಸ್ಟ್, ಸ್ಲೈಡ್ ಶೇರ್, ವಾಟ್ಸಾಪ್, ಟೆಲಿಗ್ರಾಂ ಹೀಗೆ ಎಲ್ಲಾ ಸಾಮಾಜಿಕ ತಾಣಗಳನ್ನೂ ರಾಜನೀತಿ ತಂಡವೇ ನೋಡಿಕೊಳ್ತಿದೆ. ಬಿ ಎಸ್ ವೈ ಫೇಸ್ಬುಕ್ ನಲ್ಲಿ 1 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ. ಸಿದ್ದರಾಮಯ್ಯಗೆ 500000 ಫಾಲೋವರ್ಸ್ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...