alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಕಾಟ ತಾಳಲಾರದೆ ಮರ ಏರಿ ಕುಳಿತ ಭೂಪ

imagesಪತ್ನಿಯ ಕಾಟ ತಾಳಲಾರದೆ ವ್ಯಕ್ತಿಯೊಬ್ಬ ತೆಂಗಿನ ಮರವೇರಿ ಕುಳಿತಿರುವ ಘಟನೆ ಮೈಸೂರಿನ ಸರಸ್ವತಿ ಪುರಂ ಪಾರ್ಕ್ ನಲ್ಲಿ ನಡೆದಿದ್ದು, ನನಗೆ ನ್ಯಾಯ ಕೊಡಿಸಬೇಕು. ಜೊತೆಗೆ ಅಂಬಿ ಅಣ್ಣ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾನೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೋಲೀಸರು ಹಾಗೂ ಅಗ್ನಿಶಾಮಕ ದಳದವರು ಆತನ ಮನವೊಲಿಸಲು ಹರಸಾಹಸಪಡುತ್ತಿದ್ದು ಈ ದೃಶ್ಯ ನೋಡಲು ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಈತ, ಮನೆಯಲ್ಲಿ ಹೆಂಡತಿ ಕಾಟ ತಾಳಲಾರದೆ ಈ ರೀತಿ ಮಾಡಿರುವುದಾಗಿ ಹೇಳುತ್ತಿರುವುದಲ್ಲದೇ ಅಂಬಿ ಅಣ್ಣ ಬರುವವರೆಗೂ ಕೆಳಗೆ ಇಳಿಯುವುದಿಲ್ಲ. ಬೇಕೇ ಬೇಕು ನ್ಯಾಯ ಬೇಕು ಎಂದು ಕೂಗುತ್ತಿದ್ದಾನೆ. ಆತನ ಹೆಂಡತಿಯನ್ನು ಈ ಕುರಿತು ವಿಚಾರಿಸಿದಾಗ, ಆಕೆ ಹೇಳುತ್ತಿರುವುದೇನೆಂದರೆ, ಪತಿ 2 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಈ ಮೊದಲೂ ಇಂತದ್ದೇ ಕೆಲಸ ಮಾಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮನೆಯಲ್ಲಿ ತಾನು ಯಾವುದೇ ಕಾಟ ನೀಡಿಲ್ಲ. ನನ್ನ ಹೆಸರಿನಲ್ಲಿರುವ ಮನೆಯನ್ನು ತಮ್ಮ ಸಹೋದರಿ ಹೆಸರಿಗೆ ವರ್ಗಾಯಿಸಲು ಈ ರೀತಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...