alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಕದ್ದ ಚಿನ್ನವನ್ನು ವಾಪಸ್ ಕೊಟ್ಟ ಪತ್ನಿ

kolluru

ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಕಳುವಾಗಿದ್ದ ಚಿನ್ನಾಭರಣಗಳು ಸಿಕ್ಕಿವೆ. ಇವುಗಳನ್ನು ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಕಳವು ಮಾಡಿದ್ದರಿಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಆಭರಣ ಕಳವು ಮಾಡಿದವನ ಪತ್ನಿಯೇ ಅವುಗಳನ್ನು ತಂದು ದೇವಾಲಯದ ಆಡಳಿತ ಮಂಡಳಿಯವರಿಗೆ ಒಪ್ಪಿಸಿದ್ದಾರೆ. ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಹೀಗೆ
ಬರುವ ಭಕ್ತರು ಹರಕೆ ತೀರಿಸಲು ಕೊಟ್ಟ ಚಿನ್ನಾಭರಣಗಳನ್ನು ದೇವಾಲಯದ ಖಜಾನೆಯಲ್ಲಿ ಇಡಬೇಕಿತ್ತು. ಆದರೆ, ಆಡಳಿತ ನೋಡಿಕೊಳ್ಳುತ್ತಿದ್ದ ಅಧಿಕಾರಿಯೊಬ್ಬರ ನಿರ್ಲಕ್ಷ್ಯದಿಂದಾಗಿ ದೇವಾಲಯದ ಸೇವಾ ಕೌಂಟರ್
ನಲ್ಲಿಯೇ ಇಡಲಾಗಿದೆ. ಇಲ್ಲಿ ಶಿವರಾಮ್ ಎಂಬಾತ ಕೆಲಸ ಮಾಡುತ್ತಿದ್ದ.

ಭಕ್ತರೊಬ್ಬರು ದೇವಿಗೆ ನೀಡಿದ್ದ ಚಿನ್ನಾಭರಣವನ್ನು ಶಿವರಾಮ್ ಕಳವು ಮಾಡಿದ್ದು, ದೇವಾಲಯದ ಆಡಳಿತ ಮಂಡಳಿಯವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಲೆ ಮರೆಸಿಕೊಂಡಿದ್ದ ಶಿವರಾಮ್ ಪತ್ತೆಗೆ ಹುಡುಕಾಟ ನಡೆಸಿರುವಾಗಲೇ ಆತನ ಪತ್ನಿ ಮನೆಯಲ್ಲಿದ್ದ ಚಿನ್ನಾಭರಣ ತಂದು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಒಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...