alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲೇ ಯುವತಿಯರ ಅರೆನಗ್ನ ನೃತ್ಯ

dance-funky-300x189

ಯಾವುದೇ ಸಭೆ, ಸಮಾರಂಭ ಆಯೋಜಿಸಿದರೂ ಇತ್ತೀಚೆಗೆ ಕೆಲವರು ಡ್ಯಾನ್ಸ್ ಪ್ರೋಗ್ರಾಂ ಏರ್ಪಡಿಸುವ ಪರಿಪಾಠ ಬೆಳಸಿಕೊಂಡಿದ್ದಾರೆ. ಗಣರಾಜ್ಯೋತ್ಸವದಂದು ಕೈದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜೈಲಿನಲ್ಲಿ ಯುವತಿಯರಿಂದ ನೃತ್ಯ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಈಗ ದೇವಾಲಯವೊಂದರಲ್ಲಿ ಭಜನೆ, ಹರಿಕತೆ ಬದಲಿಗೆ ಅಶ್ಲೀಲ ನೃತ್ಯ ಪ್ರದರ್ಶನ ನಡೆಸಿದ ಘಟನೆ ವರದಿಯಾಗಿದೆ. ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ಹಾಡುಗಳಿಗೆ ಆಂಧ್ರಪ್ರದೇಶದ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸಲಾಗಿದೆ. ಗ್ರಾಮದ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ, ರಾತ್ರಿ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಆದರೆ ಅನುಮತಿ ಪಡೆಯದ ಕಾರಣ, ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಂಧ್ರಪ್ರದೇಶದ ಯುವತಿಯರು ಅರೆನಗ್ನ ಸ್ಥಿತಿಯಲ್ಲಿ ಅಶ್ಲೀಲವಾಗಿ ನೃತ್ಯ ಪ್ರದರ್ಶನ ಮಾಡುತ್ತಿದ್ದರು. ಪೊಲೀಸರು ಇದನ್ನು ನಿಲ್ಲಿಸುವಂತೆ ಆಯೋಜಕರಿಗೆ ಹೇಳಿದರೂ, ಅವರು ಕೇಳದೆ ಪೊಲೀಸರ ಮೇಲೆಯೇ ಕೈ ಮಾಡಿ, ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಕೊನೆಗೆ ಹೆಚ್ಚಿನ ಸಂಖ್ಯೆಯ ಪೊಲೀಸರು ಆಗಮಿಸಿ, ಕೆಲವರನ್ನು ವಶಕ್ಕೆ ಪಡೆದು, ಸೆರೆಯಲ್ಲಿದ್ದ ಪೊಲೀಸರನ್ನು ಪಾರು ಮಾಡಿದ್ದಾರೆ. ಈ ಸಂಬಂಧ ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...