alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲೇ ಮಹಿಳೆಯಿಂದ ಹೈಡ್ರಾಮಾ

ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬಿಳಿ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯೊಬ್ಬರು ಹೈಡ್ರಾಮಾ ನಡೆಸಿದ್ದಾರೆ.

ಗ್ರಾಮದಲ್ಲಿ ದಲಿತರಿಂದ ಹಣ ಪಡೆದು ಜಾತ್ರೆ ನಡೆಸಲಾಗಿದೆ. ಆದರೆ, ದಲಿತರು ದೇವಾಲಯಕ್ಕೆ ಪ್ರವೇಶಿಸುತ್ತಿದ್ದಂತೆ, ದೇವಾಲಯಕ್ಕೆ ಮೈಲಿಗೆ ಆಗಿದೆ ಎಂದು ಬೆದರಿಸಿದ ಮೇಲ್ವರ್ಗದ ಮಹಿಳೆ, ಮೈಮೇಲೆ ದೇವರು ಬಂದಂತೆ ನಟಿಸಿ ಹೈಡ್ರಾಮಾ ನಡೆಸಿದ್ದಾರೆ.

ದೇವಾಲಯಕ್ಕೆ ಪ್ರವೇಶಿಸಿದ ನೀವು ವಾಂತಿ, ಭೇದಿಯಿಂದ ತೊಂದರೆ ಅನುಭವಿಸುತ್ತೀರಿ ಎಂದು ಬೆದರಿಸಿದ್ದಾರೆ. ದೇವಿ ಜಾತ್ರೆಗೆ ಅಡ್ಡಿಪಡಿಸಿದ್ದರಿಂದ ನಿಮಗೆ ಒಳ್ಳೆಯದಾಗಲ್ಲ, ಕಷ್ಟ ಅನುಭವಿಸುತ್ತೀರಿ ಎಂದೆಲ್ಲಾ ಶಾಪ ಹಾಕಿ ಹೈಡ್ರಾಮಾ ನಡೆಸಿದ್ದಾರೆ.

ಗ್ರಾಮದಲ್ಲಿ ಹಿಂದಿನಿಂದಲೂ ಜಾತ್ರೆ ನಡೆಯುತ್ತದೆ. ದಲಿತರಿಂದಲೂ ಜಾತ್ರೆಗೆ ಹಣ ಸಂಗ್ರಹಿಸಿದ್ದರಿಂದ ಕೆಲವು ಯುವಕರು ಜಾತ್ರೆಯಂದು ದೇವಾಲಯಕ್ಕೆ ಪ್ರವೇಶಿಸಿದ್ದಾರೆ. ಆದರೆ, ಹಣ ಕೊಡಬೇಕು ಅಷ್ಟೇ, ದೇವಾಲಯಕ್ಕೆ ಬರುವಂತಿಲ್ಲ ಎಂದು ಕೆಲವರು ಅಡ್ಡಿಪಡಿಸಿದ್ದು, ಎರಡೂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆಯೊಬ್ಬರು ದೇವರು ಮೈಮೇಲೆ ಬಂದಿದೆ ಎಂದು ನಟಿಸುತ್ತಾ ದಲಿತ ಯುವಕರಿಗೆ ಬೆದರಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಗ್ರಾಮಸ್ಥರು ಜಾತ್ರೆ ಸ್ಥಗಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...