alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಸಿದ್ಧ ನಂಜನಗೂಡು ನಂಜುಂಡೇಶ್ವರ ದೇವಾಲಯ ನೋಡಬನ್ನಿ

Srikanat

ನಂಜನಗೂಡು ಎಂದ ಕೂಡಲೇ ಕೆಲವರಿಗೆ ಹಲ್ಲಿನ ಪುಡಿ ನೆನಪಾಗುತ್ತದೆ. ಮೈಸೂರಿನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ನಂಜನಗೂಡು ಪ್ರಮುಖ ಯಾತ್ರಾ ಸ್ಥಳ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು, ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ. ಕಪಿಲಾ ನದಿಯ ದಂಡೆಯಲ್ಲಿರುವ ನಂಜನಗೂಡಿನಲ್ಲಿ ನಂಜುಂಡೇಶ್ವರ ದೇವಾಲಯ ಇದೆ.

ಕಪಿಲಾ ನದಿಯ ದಂಡೆಯ ತೀರದಲ್ಲಿ ಪರಶುರಾಮ ತಪಸ್ಸು ಮಾಡಿದ್ದನೆಂಬ ಐತಿಹ್ಯ ಇದೆ. ಪರಶುರಾಮನ ತಪಸ್ಸಿಗೆ ಒಲಿದ ಶಿವನು ಪ್ರತ್ಯಕ್ಷನಾಗಿ ವರ ನೀಡಿದ್ದ ಈ ಸ್ಥಳದಲ್ಲಿ ನಂತರದಲ್ಲಿ ಗೌತಮ ಋಷಿಗಳು ತಪಸ್ಸು ಮಾಡಿ ದೇವಾಲಯವನ್ನು ಅಭಿವೃದ್ಧಿಪಡಿಸಿದ್ದರೆನ್ನಲಾಗಿದೆ. ದಕ್ಷಿಣ ಭಾರತದ ದೊಡ್ಡ ದೇವಾಲಯಗಳಲ್ಲಿ ನಂಜನಗೂಡು ನಂಜುಂಡೇಶ್ವರ ದೇವಾಲಯವೂ ಒಂದಾಗಿದೆ. 11ನೇ ಶತಮಾನದಲ್ಲಿ ಚೋಳರಿಂದ ಈ ದೇವಾಲಯ ವಿಸ್ತರಣೆಗೊಂಡಿತೆಂದು ಹೇಳಲಾಗಿದೆ. ಸುಮಾರು 385 ಅಡಿ ಉದ್ದ, 160 ಅಡಿ ಅಗಲದ ಈ ದೇವಾಲಯದಲ್ಲಿ 140ಕ್ಕೂ ಹೆಚ್ಚು ಕಂಬಗಳ ಸಂಕೀರ್ಣವಿದೆ.

1845ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಗೋಪುರ ನಿರ್ಮಿಸಿದರು. ಇಲ್ಲಿ ನಡೆಯುವ ರಥೋತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ವೈಭವದಿಂದ ನಡೆಯುವ ತೆಪ್ಪೋತ್ಸವವನ್ನು ಜನ ಕಣ್ತುಂಬಿಕೊಳ್ಳುತ್ತಾರೆ. ಇಲ್ಲಿಗೆ ಹೋಗಿಬರಲು ಬಸ್ ಗಳಿವೆ. ಉಳಿಯಲು ವಸತಿಗೃಹಗಳಿದ್ದು, ನಂಜುಂಡೇಶ್ವರನ ದರ್ಶನ ಪಡೆದು ಬನ್ನಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...