alex Certify
ಕನ್ನಡ ದುನಿಯಾ       Mobile App
       

Kannada Duniya

‘ಟೆಲಿಕಾಂ ಟವರ್‌ ಅಳವಡಿಕೆ ಇನ್ನು ಸುಲಭವಲ್ಲ’

ಇದುವರೆಗೂ ಖಾಸಗಿ ಟೆಲಿಕಾಂ ಕಂಪನಿಗಳು ಖಾಸಗಿಯವರ ಸಹ ಭಾಗಿತ್ವದಲ್ಲಿ ಟವರ್ ಅಳವಡಿಸುತ್ತಿದ್ದು, ಇನ್ನು ಮುಂದೆ ಈ ಪ್ರಕ್ರಿಯೆ ಅಷ್ಟು ಸುಲಭವಲ್ಲ.

ರಾಜ್ಯಾದ್ಯಂತ ಹಾಕಿರುವ ಎಲ್ಲ ಬಗೆಯ ಟವರ್‌ ಗಳಿಗೆ ಆಯಾ ಕಂಪನಿಗಳು ಮೂರು ತಿಂಗಳೊಳಗಾಗಿ ಲೈಸನ್ಸ್‌ ಪಡೆಯುವುದು ಕಡ್ಡಾಯ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಇನ್ಸಾಲೇಷನ್‌ ಆಫ್ ನ್ಯೂ ಟೆಲಿ ಕಮ್ಯುನಿಕೇಷನ್ ಇನ್‌ಫ್ರಾಸ್ಟ್ರಕ್ಚರ್ ಕಾಯಿದೆಗೆ‌ ಹೊಸದಾಗಿ ಕೆಲ‌ ನಿಯಮಗಳನ್ನು ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.‌

ಇದುವರೆಗೂ ಟವರ್‌ ಅಳವಡಿಕೆ ಕುರಿತಂತೆ ಯಾವುದೇ ರೀತಿಯ ನಿಯಮವಾಗಲಿ, ಲೈಸನ್ಸ್‌ ಆಗಲಿ ಇರಲಿಲ್ಲ. ಯಾವುದೇ ಮಾನದಂಡವಿಲ್ಲದೇ ನೆಟ್‌ ವರ್ಕ್ ಕಂಪನಿಗಳು ತಮಗೆ ಅನುಕೂಲ ಬಂದಂತೆ ಟವರ್‌‌ ಹಾಕಿದ್ದು, ಜನರ‌ ಆರೋಗ್ಯದ ದೃಷ್ಟಿಯಿಂದ ಹೊಸದಾಗಿ ನಿಯಮ ರೂಪಿಸಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...