alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ತಾನು ಪಾರಿವಾಳ ಹಿಡಿಯುವಾಗ ಅಡ್ಡ ಬಂದನೆಂಬ ಆಕ್ರೋಶದಿಂದ 14 ವರ್ಷದ ಬಾಲಕನೊಬ್ಬ 2 ವರ್ಷದ ಮಗುವನ್ನು ತುಳಿದು ಕೊಂದು ಬಳಿಕ ಶವವನ್ನು ಪೊದೆಯಲ್ಲಿ ಎಸೆದಿದ್ದ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಸೋಲದೇವನಹಳ್ಳಿಯಲ್ಲಿ ಬುಧವಾರದಂದು ಈ ಘಟನೆ ನಡೆದಿದ್ದು, ರಾಯಚೂರಿನಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದ ಬಸವರಾಜ ಎಂಬವರ ಮೂರನೇ ಪುತ್ರ ಹತ್ಯೆಯಾದ ಮಗುವಾಗಿದ್ದಾನೆ. ಇವರ ಮನೆ ಸಮೀಪದಲ್ಲೇ ಬಾಗಲಕೋಟೆಯ ಕುಟುಂಬವೊಂದು ವಾಸವಾಗಿದ್ದು, ಅವರ 14 ವರ್ಷದ ಪುತ್ರ ಈ ಹತ್ಯೆ ಮಾಡಿದ್ದಾನೆ.

ಬಾಲಕನ ಕುಟುಂಬದವರು ಪಾರಿವಾಳಗಳನ್ನು ಸಾಕಿದ್ದು, ಇದಕ್ಕೆ ಬಸವರಾಜ ಸೇರಿದಂತೆ ನೆರೆಯವರು ಆಕ್ಷೇಪಿಸಿದ್ದರೆಂದು ಹೇಳಲಾಗಿದೆ. ಈ ಕಾರಣಕ್ಕೆ ಕೆಲ ದಿನಗಳ ಹಿಂದೆ ಮಾತಿನ ಚಕಮಕಿಯೂ ನಡೆದಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ಮಧ್ಯಾಹ್ನ ಪಾರಿವಾಳವೊಂದು ತಪ್ಪಿಸಿಕೊಂಡಿದ್ದು, ಅದು ರಸ್ತೆ ಬದಿ ಕುಳಿತಿರುವುದನ್ನು ಬಾಲಕ ನೋಡಿದ್ದಾನೆ.

ಅದನ್ನು ಹಿಡಿಯಲು ಮುಂದಾದ ವೇಳೆ ಬಸವರಾಜನ 2 ವರ್ಷದ ಮಗು ಅಡ್ಡ ಬಂದಿದೆ. ಇದರಿಂದಾಗಿ ಬಾಲಕನಿಗೆ ಪಾರಿವಾಳ ಹಿಡಿಯಲು ಸಾಧ್ಯವಾಗಿಲ್ಲ. ಅಷ್ಟಕ್ಕೇ ಆಕ್ರೋಶಗೊಂಡ ಆತ ಮಗುವನ್ನು ಎತ್ತಿಕೊಂಡು ಹೋಗಿ ಸನಿಹದ ಪೊದೆ ಬಳಿ ತುಳಿದು ಸಾಯಿಸಿದ್ದಲ್ಲದೇ ಶವವನ್ನು ಅಲ್ಲಿಯೇ ಬಿಸಾಡಿದ್ದಾನೆ. ಮಗು ಕಾಣದೆ ಕಂಗಾಲಾದ ಬಸವರಾಜನ ಕುಟುಂಬ ಹುಡುಕಾಡಿದ್ದು, ಪೊದೆ ಬಳಿ ಮಗುವನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಈಗಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...