alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಕೇಸ್ ತಾನೇ ನಡೆಸಲು ವಕೀಲನಾದ ಇಂಜಿನಿಯರ್ ಗೆ 2 ವರ್ಷ ಜೈಲು

ಪರಿಚಿತ ಯುವತಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ವಕೀಲರೊಬ್ಬರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಿವಪ್ರಸಾದ್, ಮೂಲತಃ ಸಾಫ್ಟ್ ವೇರ್ ಇಂಜಿನಿಯರ್. ತನ್ನ ಕೇಸ್ ತಾನೇ ನಡೆಸಲು ಎಲ್.ಎಲ್.ಬಿ. ಕಲಿತಿದ್ದರು. 2008 ರಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಶಿವಪ್ರಸಾದ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 1 ನೇ ಎ.ಸಿ.ಎಂ.ಎಂ. ನ್ಯಾಯಾಲಯ ಆರೋಪಿಗೆ 25 ಸಾವಿರ ರೂ. ದಂಡ ಹಾಗೂ 2 ವರ್ಷ ಶಿಕ್ಷೆ ವಿಧಿಸಿದೆ. 9 ವರ್ಷಗಳಿಂದ ನಡೆಯುತ್ತಿದ್ದ ವಿಚಾರಣೆ ಕೊನೆಗೂ ಅಂತ್ಯ ಕಂಡಿದೆ.

ಯುವತಿ, ತನ್ನ ಫೋಟೋಗಳನ್ನು ತಿರುಚಿ ಸ್ನೇಹಿತರಿಗೆ ಕಳುಹಿಸಿದ್ದಾರೆ ಎಂದು ಶಿವಪ್ರಸಾದ್ ಮೇಲೆ ದೂರು ನೀಡಿದ್ದರು. ಅಲ್ಲದೆ ಇದ್ರಿಂದ ತನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಸಂತ್ರಸ್ಥೆ ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...