alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣೀರಿಟ್ಟ ಆರೋಗ್ಯಮಾತೆ….ಕಾರಣವೇನು…?

ದಾವಣಗೆರೆ: ಕ್ರೈಸ್ತರ ಧಾರ್ಮಿಕ ಕೇಂದ್ರ ಹರಿಹರದ ಆರೋಗ್ಯ ಮಾತೆ ಚರ್ಚ್ ನ ಆರೋಗ್ಯ ಮಾತೆ ಕಣ್ಣೀರಿಡುತ್ತಿರುವ ಘಟನೆ ನಡೆದಿದೆ. ಮರಿಯಾ ಮಾತೆಯ ವಿಗ್ರಹದ ಕಣ್ಣಿಂದ ಸುರಿಯುತ್ತಿರುವ ನೀರಿನ ವಿಸ್ಮಯ ನೋಡಲು ಸಾವಿರಾರು ಜನರು ಚರ್ಚ್ ಗೆ ಧಾವಿಸುತ್ತಿದ್ದಾರೆ.

ಬುಧವಾರ ಮರಿಯಾ ನಿವಾಸ ಶಾಲೆ ಜವಾನ ಸೆಲೀನ್ ಎಂಬುವವರು ಎಂದಿನಂತೆ ಪ್ರಾರ್ಥನೆ ಸಲ್ಲಿಸಲು ಚರ್ಚ್ ಗೆ ಬಂದಿದ್ದಾರೆ. ಈ ವೇಳೆ ಮರೀಯಾ ವಿಗ್ರಹದ ಕಣ್ಣಿನಿಂದ ನೀರು ಬರುತ್ತಿರುವುದನ್ನು ಕಂಡು, ಚರ್ಚಿನ ಫಾದರ್ ಆಥೋನಿ ಪೀಟರ್ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಫಾದರ್ ಅದನ್ನು ಪರೀಕ್ಷಿಸಿ ನೋಡಿದಾಗ ವಿಗ್ರಹದ ಎಡ ಭಾಗದ ಕಣ್ಣಿನಿಂದ ನೀರು ತೊಟ್ಟಿಕ್ಕುತ್ತಿತ್ತು. ಫಾದರ್ ಒಂದು ಬಟ್ಟೆಯಿಂದ ಅದನ್ನು ಒರೆಸಿದ್ದಾರೆ. ಆದರೂ ಕೆಲ ಸಮಯದಲ್ಲಿ ಮತ್ತೆ ನೀರು ಹರಿಯಲಾರಂಭಿಸಿದೆ.

ಸುದ್ದಿ ತಿಳಿದ ಜಿಲ್ಲೆಯ ಜನರು ಆರೋಗ್ಯ ಮಾತೆಯ ಕಣ್ಣಲ್ಲಿ ನೀರು…ವಿಸ್ಮಯ ನೋಡಲು ಚರ್ಚ್ ಗೆ ಆಗಮಿಸುತ್ತಿದ್ದಾರೆ. ಆರೋಗ್ಯ ಮಾತೆ ಕಣ್ಣೀರಿಡಲು ಕಾರಣವೇನಿರಬಹುದು ಎಂಬುದು ಹಲವರ ಪ್ರೆಶ್ನೆ. ಅಲ್ಲದೇ ಸೆ.8ರಂದು ಚರ್ಚ್ ನಲ್ಲಿ ಮೇರಿ ಮಾತೆ ಉತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಆರೋಗ್ಯ ಮಾತೆ ಕಣ್ಣೀರು ಸುರಿಸುತ್ತಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...