alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕರ ವರ್ಗಾವಣೆ: ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ವರ್ಗಾವಣೆ ಬಯಸಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಇಲ್ಲಿದೆ. ಡಿಸೆಂಬರ್ 29 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಅಂದಿನಿಂದ ಜನವರಿ 10 ರ ವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ಜನವರಿ 10 ರಿಂದ 12 ರ ವರೆಗೆ ಅರ್ಜಿಯ ಮುದ್ರಿತ ಪ್ರತಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಜನವರಿ 12 ರಿಂದ 16 ರ ವರೆಗೆ ಬಿ.ಇ.ಒ. ಹಂತದಲ್ಲಿ ಸೇವಾ ದಾಖಲೆಗಳ ಪರಿಶೀಲನೆ ನಡೆಯಲಿದೆ. ಜನವರಿ 18 ರಿಂದ ಫೆಬ್ರವರಿ 3 ರ ವರೆಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಫೆಬ್ರವರಿ 5, 6 ರಂದು ಅಂತಿಮ ವರ್ಗಾವಣೆ ಪಟ್ಟಿ ಪ್ರಕಟವಾಗಲಿದೆ.

ಫೆಬ್ರವರಿ 8 ರಿಂದ 12 ರ ವರೆಗೆ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ನಡೆಯಲಿದೆ. ಫೆಬ್ರವರಿ 15 ರಿಂದ ಮಾರ್ಚ್ 4 ರ ವರೆಗೆ ವರ್ಗಾವಣೆ ಕ್ರಮ ಮುಂದುವರೆಯಲಿದೆ.

ಈ ಬಾರಿ ಶೇ. 15 ರಷ್ಟು ಶಿಕ್ಷಕರ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ವರ್ಗಾವಣೆಯ ನಿರೀಕ್ಷೆಯಲ್ಲಿದ್ದ ಬಹುತೇಕರಿಗೆ ಅವಕಾಶ ಸಿಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಗಾವಣೆಯಾದ ಸ್ಥಳದಲ್ಲಿ ಕೆಲಸ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...