alex Certify
ಕನ್ನಡ ದುನಿಯಾ       Mobile App
       

Kannada Duniya

ಮಡಿಕೇರಿ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರ ದಾಳಿ

ಮಡಿಕೇರಿ: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಆಡಳಿತಾರೂಢ ಎ.ಐ.ಎ.ಡಿ.ಎಂ.ಕೆ.ಯ 17 ಶಾಸಕರು ಟಿ.ಟಿ.ವಿ. ದಿನಕರನ್ ಜೊತೆ ಗುರುತಿಸಿಕೊಂಡಿದ್ದು, ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲ್ಲೂಕಿನ ರೆಸಾರ್ಟ್ ನಲ್ಲಿ ತಂಗಿದ್ದಾರೆ.

ಈ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರು ದಾಳಿ ಮಾಡಿದ್ದಾರೆ. ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಒಂದಾದ ಬಳಿಕ ಅನೇಕ ಬೆಳವಣಿಗೆ ನಡೆದಿವೆ.

ಟಿ.ಟಿ.ವಿ. ದಿನಕರನ್ ಅವರೊಂದಿಗೆ 17 ಶಾಸಕರು ಗುರುತಿಸಿಕೊಂಡಿರುವುದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಡಿ.ಎಂ.ಕೆ. ನಾಯಕ ಎಂ.ಕೆ. ಸ್ಟಾಲಿನ್ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಸರ್ಕಾರ ಅಲ್ಪಮತಕ್ಕೆ ಕುಸಿದಿರುವುದರಿಂದ ಪೊಲೀಸ್ ರೇಡ್ ಮೂಲಕ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನ ನಡೆಸಲಾಗಿದೆ.

ಇದರ ಭಾಗವಾಗಿ ಶಾಸಕರು ತಂಗಿರುವ ಸೋಮವಾರ ಪೇಟೆಯ ರೆಸಾರ್ಟ್ ಮೇಲೆ ತಮಿಳುನಾಡು ಪೊಲೀಸರು ದಾಳಿ ಮಾಡಿದ್ದು, ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...