alex Certify
ಕನ್ನಡ ದುನಿಯಾ       Mobile App
       

Kannada Duniya

ಬರೋಬ್ಬರಿ 8 ಗಂಟೆ ಈಜಿ ದಡ ಸೇರಿದ ಮೀನುಗಾರರು

boat

ಭಟ್ಕಳ: ಮೀನು ಹಿಡಿಯಲು ಕಡಲಿಗೆ ಹೋಗಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ದೋಣಿ ಮಗುಚಿ, ಅಪಾಯಕ್ಕೆ ಸಿಲುಕಿದ್ದ 7 ಮಂದಿ ಬರೋಬ್ಬರಿ 8 ಗಂಟೆ ಕಾಲ ಈಜಿಕೊಂಡು ದಡ ಸೇರಿಕೊಂಡಿದ್ದಾರೆ. ಆದರೆ, ಘಟನೆಯಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ.

ಭಟ್ಕಳ ಸಮೀಪದ ಮಾವಿನಕುರ್ವೆ ಬಂದರು ಸಮೀಪ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮಾವಿನಕುರ್ವೆ ನಿವಾಸಿಗಳಾದ ಪಾಂಡುರಂಗ ಖಾರ್ವಿ, ಕೃಷ್ಣ ಖಾರ್ವಿ, ನಾಗೇಶ ಖಾರ್ವಿ, ರಾಮದಾಸ ಖಾರ್ವಿ, ಮಹಾದೇವ, ಸುಭಾಷ್, ಅಜಿತ್ ಅವರು ಸತತ 8 ಗಂಟೆ ಕಾಲ ಈಜಿಕೊಂಡು ದಡ ಸೇರಿದ್ದಾರೆ. ಇವರ ಜೊತೆಗಿದ್ದ ಮಂಜುನಾಥ್ ಬಾಬು ಖಾರ್ವಿ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಹುಡುಕಾಟ ನಡೆದಿದೆ. ಬುಧವಾರ ಮಧ್ಯಾಹ್ನ ಇವರೆಲ್ಲ ಮೀನು ಹಿಡಿಯಲು ಪಟ್ಟಿ ದೋಣಿಯಲ್ಲಿ ತೆರಳಿದ್ದರೆನ್ನಲಾಗಿದೆ.

ಸಮುದ್ರದಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿದ ದೋಣಿ, ಮಗುಚಿದ್ದು, ಸಂಪೂರ್ಣ ಹಾನಿಗೊಳಗಾಗಿದೆ. ಸಂಜೆ 4.30ರಿಂದ ತಡರಾತ್ರಿವರೆಗೂ ಅರಬ್ಬಿ ಸಮುದ್ರದಲ್ಲೇ ಈಜಿದ್ದಾರೆ. ಕೊನೆಗೆ ಇವರನ್ನು ಗಮನಿಸಿದ ಇನ್ನೊಂದು ಮೀನುಗಾರಿಕೆ ದೋಣಿಯಲ್ಲಿದ್ದವರು ರಕ್ಷಿಸಿದ್ದಾರೆ. ಆದರೆ, ಘಟನೆಯಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...