alex Certify
ಕನ್ನಡ ದುನಿಯಾ       Mobile App
       

Kannada Duniya

ಕರಿಂಜ ಸ್ವಾಮಿ ವಿರುದ್ಧ ಅಭಯಚಂದ್ರ ಜೈನ್ ಕಿಡಿ

ಮಂಗಳೂರು: ಕರಿಂಜ ಸ್ವಾಮಿ ಸರ್ಕಾರವನ್ನು ಟೀಕಿಸುವ ಭರದಲ್ಲಿ ಮುಖ್ಯಮಂತ್ರಿ ಮತ್ತು ನನ್ನನ್ನು ರಾಕ್ಷಸನೆಂದು ನಿಂದಿಸಿದ್ದಾರೆ. ಅವರ ವಿರುದ್ಧ ಕಪ್ಪು ಬಾವುಟದ ಹೋರಾಟ ನಡೆಸಬೇಕಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.

ಮೂಡಬಿದರೆಯ ಕರಿಂಜ ಮುಕ್ತಾನಂದ ಸ್ವಾಮೀಜಿ ಇತ್ತೀಚೆಗೆ ನೀಡಿದ್ದ ಹೇಳಿಕೆಯ ಕುರಿತು ಪ್ರತಿಕ್ರಿಯೆ ರೂಪದಲ್ಲಿ ಮಾತನಾಡಿದ ಅಭಯಚಂದ್ರ ಜೈನ್, ನನಗೆ ರಾಕ್ಷಸನೆಂದು ಬೈಯ್ಯಲಿ. ಆದರೆ, ಮುಖ್ಯಮಂತ್ರಿಯವರನ್ನು ಬೈದರೆ ಸುಮ್ಮನಿರುವುದಿಲ್ಲ. ಸಿ.ಎಂ.ಗೆ ಬೈದಾಡುವ ಯಾವ ಸ್ವಾಮೀಜಿಯನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಕರಿಂಜ ಸ್ವಾಮೀಜಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಹೋರಾಟ ನಡೆಸಲಾಗುವುದು. ಕರಿಂಜ ಸ್ವಾಮಿ ಬೇಕಾದರೆ, ತಮ್ಮ ವಿರುದ್ಧ ಚುನಾವಣೆಗೆ ನಿಲ್ಲಲಿ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಅಭಯಚಂದ್ರ ಜೈನ್ ಅವರ ಈ ಹೇಳಿಕೆ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...