alex Certify
ಕನ್ನಡ ದುನಿಯಾ       Mobile App
       

Kannada Duniya

1 ಕೋಟಿ ರೂ. ವಂಚನೆ: ಸ್ವಾಮೀಜಿಯಿಂದ ಹೋರಾಟ

money

ಹಾವೇರಿ:  ಜಮೀನು ಕೊಡುವುದಾಗಿ ಹೇಳಿ, ಸ್ವಾಮೀಜಿಯೊಬ್ಬರಿಂದ 1 ಕೋಟಿ ರೂ. ಪಡೆದು ವಂಚಿಸಿದ ಘಟನೆ ವರದಿಯಾಗಿದೆ. ಹಣ ಕಳೆದುಕೊಂಡ ಸ್ವಾಮೀಜಿ ವಂಚಕನ ಮನೆ ಎದುರು ಹೋರಾಟ ನಡೆಸಿದ್ದಾರೆ.

ಹರಿದ್ವಾರದ ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿ ಬ್ಯಾಡಗಿಯಲ್ಲಿ ಮಠ ಕಟ್ಟಲು ಭಕ್ತರಿಂದ 1 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದರು. ಜಮೀನು ಖರೀದಿ ಉದ್ದೇಶದಿಂದ ಹಣವನ್ನು ಪ್ರಮುಖ ವರ್ತಕರೊಬ್ಬರಿಗೆ ಕೊಡಲಾಗಿತ್ತು. ಆತ 15 ಲಕ್ಷ ರೂ ವಾಪಸ್ ಕೊಟ್ಟಿದ್ದು, ಉಳಿದ ಹಣ ಕೊಡದೇ ವಂಚಿಸಿದ್ದಾನೆ ಎಂದು ಸ್ವಾಮೀಜಿ ದೂರಿದ್ದಾರೆ.

ಮೊದಲಿಗೆ ಕಮಿಷನ್ ಪಡೆದು ಹಳೆ ನೋಟುಗಳ ಬದಲಾವಣೆ ಮಾಡಿಕೊಡುವುದಾಗಿ ವರ್ತಕ ಹಣ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಇದನ್ನು ಅಲ್ಲಗಳೆದ ಸ್ವಾಮೀಜಿ, ಜಮೀನು ಖರೀದಿಗೆ ಹಣ ಕೊಟ್ಟಿದ್ದೆ. ನೋಟ್ ಬದಲಾಯಿಸಿಕೊಳ್ಳಲು ಕೊಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವರ್ತಕನ ಮನೆ ಎದುರು ಹೋರಾಟ ಮುಂದುವರೆಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...