alex Certify
ಕನ್ನಡ ದುನಿಯಾ       Mobile App
       

Kannada Duniya

ಖಾವಿ ಬಟ್ಟೆಯಲ್ಲೇ ಹಸೆಮಣೆ ಏರಿದ ಸ್ವಾಮೀಜಿ

prva

ಕಲಬುರಗಿ: ಸ್ವಾಮೀಜಿಯೊಬ್ಬರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರ ಗ್ರಾಮದ ಪೀಠಾಧಿಪತಿ, ಕೇರಳ ಮೂಲದ ಯುವತಿಯನ್ನು ಮದುವೆಯಾಗಿದ್ದಾರೆ.

ಅರೆ ಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿಯಾಗಿರುವ ಪ್ರಣವಾನಂದ ಸ್ವಾಮೀಜಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು. ಕೇರಳ ಮೂಲದ ಮೀರಾ ಬಿಕಾಂ ಓದುತ್ತಿದ್ದು, ಪ್ರಣವಾನಂದ ಸ್ವಾಮೀಜಿ ಎಂ.ಬಿ.ಎ. ಪದವೀಧರರಾಗಿದ್ದಾರೆ. ಶ್ರೀಗಳು ನಗರದ ಶರಣಬಸವೇಶ್ವರ ದೇವಾಲಯದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಹಿರಿಯರ ಸಮ್ಮುಖದಲ್ಲಿ ಮೀರಾ ಅವರನ್ನು ಮದುವೆಯಾಗಿದ್ದಾರೆ. ಶ್ರೀಗಳು ಖಾವಿ ಬಟ್ಟೆಯಲ್ಲಿಯೇ ಧಾರ್ಮಿಕ ವಿಧಿ- ವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಾವು ಪೀಠಾಧಿಪತಿಯಾಗಿರುವ ಮಠದ ಪರಂಪರೆಯಲ್ಲಿ ಸಂಸಾರಿಯಾಗಲು ಅವಕಾಶವಿದೆ. ಅದರಂತೆ ನಾನು ಮದುವೆಯಾಗಿದ್ದೇನೆ. ಸೇವಾಕಾರ್ಯಗಳನ್ನು ಮುಂದುವರೆಸುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...