alex Certify
ಕನ್ನಡ ದುನಿಯಾ       Mobile App
       

Kannada Duniya

ರಾಸಲೀಲೆ ಪ್ರಕರಣ: ನಟಿ ಕುಟುಂಬಕ್ಕೆ ಜೀವ ಬೆದರಿಕೆ

ಶಿವಮೊಗ್ಗ: ಬೆಂಗಳೂರು ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿದ್ದ ನಟಿಯ ಕುಟುಂಬಕ್ಕೆ ಬೆದರಿಕೆ ಹಾಕಲಾಗಿದೆ.

ನಟಿಯ ಸಹೋದರ ಕೃಷ್ಣ ಆಚಾರ್ಯ ಅವರಿಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಅವರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮಂಗಳೂರಿನಿಂದ ತೀರ್ಥಹಳ್ಳಿಗೆ ನಟಿಯ ಸಹೋದರ ಕೃಷ್ಣ ಮತ್ತು ಅವರ ತಾಯಿ ಕಾರಿನಲ್ಲಿ ಬರುವಾಗ, ಶಿವರಾಜಪುರ ಬಳಿ ಒಮಿನಿಯಲ್ಲಿ ಬಂದಿದ್ದ 5 ಮಂದಿ ದುಷ್ಕರ್ಮಿಗಳು ಕಾರಿಗೆ ಅಡ್ಡ ಹಾಕಿದ್ದಾರೆ.

ನಟಿ ಎಲ್ಲಿ ಎಂದು ಪ್ರಶ್ನಿಸಿದ್ದು, ಅವರು ಕಾರಿನಲ್ಲಿಲ್ಲದ ಕಾರಣ ಸಹೋದರನ ಮೇಲೆ ಹಲ್ಲೆ ಮಾಡಿ, ದಯಾನಂದ ಸ್ವಾಮಿ ಪ್ರಕರಣದಲ್ಲಿ ಯಾರ ವಿರುದ್ಧವೂ ದೂರು ಕೊಡದಂತೆ ಬೆದರಿಕೆ ಹಾಕಿದ್ದಾರೆ. ಕೃಷ್ಣ ಮತ್ತು ಅವರ ತಾಯಿ ಜೋರಾಗಿ ಕಿರುಚಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಕರಣದಲ್ಲಿ ತಮ್ಮನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ದೂರು ನೀಡುವುದಾಗಿ ನಟಿ ತಿಳಿಸಿದ್ದು, ಇದಾದ ಬಳಿಕ ಅವರ ಕುಟುಂಬದ ಮೇಲೆ ದುಷ್ಕರ್ಮಿಗಳು ಕಣ್ಣಿಟ್ಟಿದ್ದಾರೆ. ವಕೀಲರನ್ನು ಭೇಟಿ ಮಾಡಿ ಮಂಗಳೂರಿನಿಂದ ವಾಪಸ್ ಬರುವಾಗ ದುಷ್ಕರ್ಮಿಗಳು ಅಡ್ಡಹಾಕಿ ಬೆದರಿಸಿದ್ದಾರೆ. ಘಟನೆಯ ಕುರಿತು ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...