alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಪರ ಪ್ರಚಾರ ನಡೆಸಿದ್ದ ಪ್ರಾಧ್ಯಾಪಕರು ಸಸ್ಪೆಂಡ್

ಮೈಸೂರು: ಸರ್ಕಾರಿ ನೌಕರರಾಗಿದ್ದರೂ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಿದ್ದ ಆರೋಪದ ಮೇಲೆ ಪ್ರಾಧ್ಯಾಪಕರಿಬ್ಬರನ್ನು ಮೈಸೂರು ವಿಶ್ವವಿದ್ಯಾಲಯ ಅಮಾನತು ಮಾಡಿದೆ.

ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಿ.ಪಿ. ಮಹೇಶ್ ಚಂದ್ರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ, ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ ಅರವಿಂದ ಮಾಲಗತ್ತಿ ಅವರನ್ನು ಅಮಾನತು ಮಾಡಲಾಗಿದೆ.

ಏಪ್ರಿಲ್ 13 ರಂದು ಮೈಸೂರು ರಾಮಕೃಷ್ಣ ನಗರದಲ್ಲಿ ಸಿ.ಎಂ. ಪುತ್ರ ಡಾ. ಯತೀಂದ್ರ ಭಾಗವಹಿಸಿದ್ದ ‘ಸಂವಿಧಾನ ಉಳಿವು ಕೋಮುವಾದ ಅಳಿವಿಗೆ ಸಿದ್ಧರಾಮಯ್ಯರನ್ನು ಬೆಂಬಲಿಸಿ’ ಕಾರ್ಯಕ್ರಮದಲ್ಲಿ ಈ ಪ್ರಾಧ್ಯಾಪಕರಿಬ್ಬರು ಪಾಲ್ಗೊಂಡಿದ್ದರು. ನೀತಿ ಸಂಹಿತೆ ಉಲ್ಲಂಘನೆ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...