alex Certify
ಕನ್ನಡ ದುನಿಯಾ       Mobile App
       

Kannada Duniya

3 ಬಾರಿ ಗೌರಿ ಲಂಕೇಶ್ ಮನೆ ಬಳಿ ಬಂದಿದ್ದ ಹಂತಕ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ ಐ ಟಿ ತೀವ್ರಗೊಳಿಸಿದೆ. ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ಆ ದಿನ ಮೂರು ಬಾರಿ ಹಂತಕ ಅವರ ಮನೆ ಬಳಿ ಬಂದಿದ್ದ ಎನ್ನಲಾಗ್ತಿದೆ.

ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸುವ ಮೊದಲು, 35-40 ನಿಮಿಷ ಮುನ್ನ ಕೂಡ ಅವರ ಮನೆಯ ಬಳಿ ಬಂದಿದ್ದ. ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ಆತ 35 ವರ್ಷದೊಳಗಿನವನು ಅಂತಾ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಿಳಿಯ ಫಾರ್ಮಲ್ ಶರ್ಟ್ ಧರಿಸಿದ್ದ.

ಮೊದಲ ಎರಡು ಬಾರಿ ಬಂದಾಗ್ಲೂ ತಲೆಗೆ ಕಪ್ಪನೆಯ ಹೆಲ್ಮೆಟ್ ಮಾತ್ರ ಧರಿಸಿದ್ದ. ಕೈಯಲ್ಲಿ ಏನನ್ನೂ ತಂದಿರಲಿಲ್ಲ. ಆದ್ರೆ 3ನೇ ಬಾರಿ ಬಂದಾಗ ಕಪ್ಪು ಬಣ್ಣದ ಸ್ಲಿಂಗ್ ಬ್ಯಾಗ್ ಹಾಕಿಕೊಂಡಿದ್ದ. ಅದೇ ಬ್ಯಾಗ್ ನಲ್ಲಿ ಪಿಸ್ತೂಲ್ ತಂದಿರಬಹುದು ಅಂತಾ ಅಧಿಕಾರಿಗಳು ಶಂಕಿಸಿದ್ದಾರೆ.

ಗೌರಿ ಲಂಕೇಶ್ ಮನೆಯ ಗೇಟ್ ತೆರೆಯುತ್ತಿದ್ದ ವೇಳೆ ಹಿಂಬದಿಯಿಂದ ಮೊದಲು ಗುಂಡು ಹಾರಿಸಲಾಗಿದೆ ಅನ್ನೋದು ಅಧಿಕಾರಿಗಳ ಅನುಮಾನ. ಎರಡನೇ ಗುಂಡು ಗುರಿತಪ್ಪಿದೆ. ಮೂರು ಮತ್ತು ನಾಲ್ಕನೇ ಬುಲೆಟ್ ಗೌರಿ ಲಂಕೇಶ್ ರ ಎದೆಯನ್ನು ಹೊಕ್ಕಿದೆ ಅಂತಾ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...